ಕೆಲಸಕ್ಕೆಂದು ಹೋದ ಐಟಿ ಉದ್ಯೋಗಿ ಓರ್ವ ನಾಪತ್ತೆ ಆಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಹರ್ಷ ಕಣ್ಮರೆ ಆಗಿರುವ ಐಟಿ ಉದ್ಯೋಗಿ ಆಗಿದ್ದು, ಕೆಪಿ ಅಗ್ರಹಾರದ ಚೋಳರಪಾಳ್ಯದ ನಿವಾಸಿ ಎಂದು ಹೇಳಲಾಗಿದೆ. ಇನ್ನೂ ಕೆಲಸಕ್ಕೆಂದು ಹೋದ ಮಗ, ಮನೆಗೆ ವಾಪಸ್ ಆಗದೇ ಇದ್ದರಿಂದ ಪೋಷಕರು ಗಾಬರಿ ಗೊಂಡಿದ್ದು, ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಸದ್ಯ ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು, ಹಿರಿಯೂರು ಸೇತುವೆ ಬಳಿ ಯುವಕನ ಬೈಕ್ ಪತ್ತೆ ಮಾಡಿದ್ದಾರೆ. ಆದರೆ ಇನ್ನೂ ವ್ಯಕ್ತಿಯ ಸುಳಿವು ಪತ್ತೆಯಾಗದ ಕಾರಣ ಪೊಲೀಸರು ಇನ್ನೂ ಹೆಚ್ಚಿನ ವಿಚಾರಣೆಯನ್ನು ಕೈಗೊಂಡಿದ್ದಾರೆ.

