ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಸಕ್ರೆಬೈಲು ಆನೆ ಬಿಡಾರ ಇತ್ತಿಚ್ಚಿನ ದಿನಗಳಲ್ಲಿ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದೆ. ಬಾನುಮತಿ ಬಾಲ ಕಟ್ ಮಾಡಿದ ಸುದ್ದಿ ಮಾದ್ಯಮಗಳಲ್ಲಿ ಪ್ರಕಟವಾದ ನಂತರ ಬಿಡಾರದಲ್ಲಿ ನಡೆಯುವ ಯಾವೊಂದು ಘಟನಾವಳಿ ಗಳನ್ನುಮಾದ್ಯಮಗಳಿಗೆ ಸೋರಿಕೆಯಾಗದಂತೆ ಅಧಿಕಾರಿ ಸಿಬ್ಬಂದಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿಯೇ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರವಾಸಿಗರು ಇರುವ ಸಂದರ್ಭದಲ್ಲಿಯೇ ಎಡವಟ್ಟೊಂದು ನಡೆದು ಹೋಗಿದ್ದು, ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿನ್ನೆ ಬಿಡಾರದಲ್ಲಿ ನವಜೋಡಿಗಳ ವೆಡ್ಡಿಂಗ್ ಶೂಟಿಂಗ್ ವೇಳೆ ಈ ಅಚಾತುರ್ಯ ನಡೆದಿದೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಕುಂತಿ ಆನೆ ಮುಂಬಂದಿಯಲ್ಲಿ ನವ ಜೋಡಿಗಳು ಹೋಗುವ ದೃಷ್ಯದ ವೇಳೆ ದ್ರುವ ಆನೆ ಮರಿ ಏಕಾಏಕಿ ತಾಯಿ ಕುಂತಿ ಬಳಿ ಬಂದಿದೆ. ಆಗ ತಕ್ಷಣ ಕುಂತಿ ತಿರುಗಿದಾಗ ಆಯತಪ್ಪಿ ಮಾವುತ ಸಂಶುದ್ದಿನ್ ಕೆಳಗೆ ಬಿದ್ದಿದ್ದಾನೆ. ಬಿದ್ದ ಸಂಶುದ್ದೀನ್ ಮತ್ತೆ ಏಳಲೇ ಇಲ್ಲ.ಕೈಗೆ ಹಾಗು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆಗ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ದೃಷ್ಯವನ್ನು ಬಿಡಾರಕ್ಕೆ ಬಂದಿದ್ದ ಪ್ರವಾಸಿಗರೊಬ್ಬರೂ ಸಂಪೂರ್ಣ ಚಿತ್ರೀಕರಿಸಿ ಸೋಷಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.