ಬೆಂಗಳೂರು: ಜನರಿಗೆ ತೊಂದರೆ ಕೊಟ್ಟು ನೈಟ್ ಕಫ್ರ್ಯೂ ವಿಧಿಸಬೇಕೆಂಬ ದುರುದ್ದೇಶ ಸರ್ಕಾರಕ್ಕಿಲ್ಲ ಎಂದು ಸಿಎಂ ಬಸವರಾಜ್ ಬೊ ಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯಕ್ಕಾಗಿ ಈ ಕ್ರಮ ಕೈಗೊಂಡಿದ್ದೇವೆ. ಅನಿವಾರ್ಯವಾದರೂ ಸರ್ಕಾರದ ನಿರ್ಧಾರವನ್ನು ಪಾಲಿಸಬೇಕು ಎಂದು ಹೇಳಿದರು.
ವ್ಯಾಪಾರ, ವಹಿವಾಟು, ಉದ್ಯಮ ನಡೆಸುವವರಿಗೆ ತೊಂದರೆ ಕೊಡಬೇಕೆಂಬ ದುರದ್ದೇಶ ನಮಗೂ ಇಲ್ಲ. ಈಗತಾನೆ ಆರ್ಥಿಕ ಚಟುವಟಿಕೆ ಗಳು ಸುಧಾರಿಸುತ್ತಿವೆ ಎಂಬುದು ಗೊತ್ತಿದೆ. ಆದರೆ ಕೋವಿಡ್ ನಿಯಂತ್ರಣಕ್ಕೆ ಇದು ಅಗತ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ ನೈಟ್ ಕರ್ಫ್ಯೂ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.
