ಧಾರವಾಡ: ಶಾಸಕ ಬಿ.ಆರ್.ಪಾಟೀಲ ಅವರು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಆರ್.ಪಾಟೀಲ ಅವರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಕಲಾಪದ ವೇಳೆ ಅದರ ಬಗ್ಗೆ ಮಾತನಾಡಿದರೆ ಅವಕಾಶ ಕೊಡುತ್ತೇನೆ. ಚರ್ಚೆಗೆ ಅವಕಾಶ ನೀಡುತ್ತೇನೆ. ಅಧಿವೇಶನದ ವೇಳೆ ಮಂತ್ರಿಗಳು ಸ್ಪಂದಿಸಿಲ್ಲ ಎಂದಿದ್ದಾರೆ. ಅದಕ್ಕಾಗಿ ಮಂತ್ರಿಗಳು ಹೆಚ್ಚಿನ ಸಮಯ ಅಧಿವೇಶನದಲ್ಲಿ ಕುಳಿತುಕೊಳ್ಳಬೇಕು. ಜಿಲ್ಲಾ ಪ್ರವಾಸ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.
ಶಾಸಕರು ಕೇಳುವ ಪ್ರಶ್ನೆಗಳಿಗೆ ಸಚಿವರು ಸರಿಯಾದ ಉತ್ತರ ನೀಡುವ ತಯಾರಿ ಮಾಡಿಕೊಂಡು ಬರಬೇಕು. ವಿವಿಧ ಕಾರ್ಯಕ್ರಮಗಳು ಜಾರಿಯಾಗುವಂತೆ ಕೆಲಸ ಮಾಡಬೇಕು. ದುರ್ದೈವದ ಸಂಗತಿ ಈಗ ಕೆಲಸ ಬಹಳ ಕಡಿಮೆಯಾಗಿವೆ. ಇದು ಸುಧಾರಣೆ ಆಗಬೇಕು. ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಹೆಚ್ಚು ಚರ್ಚೆಗಳಾಗಬೇಕಿದೆ. ಡಿ.5, 6 ರಂದು ಪ್ರಶ್ನೋತ್ತರ ಬಳಿಕ ಉತ್ತರ ಕರ್ನಾಟಕ ಚರ್ಚೆ ಬಗ್ಗೆ ಸಮಯ ನೀಡುತ್ತೇನೆ ಎಂದರು.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಯಾರು ಏನು ಬೇಕಾದರೂ ಕೇಳಬಹುದು. ಅದನ್ನು ಅಜೆಂಡಾದಲ್ಲಿ ಹಾಕಿಸಿದ್ದೇನೆ. ಈ ಹಿಂದೆ ಅಧಿವೇಶನದಲ್ಲಿ ಗುರುವಾರ, ಮಾತ್ರ ಚರ್ಚೆಗೆ ಅವಕಾಶವಿತ್ತು. ಆಗ ಸಮಯ ಸಿಗುತ್ತಿರಲಿಲ್ಲ. ಚರ್ಚೆ ಸರಿಯಾಗಿ ಆಗುತ್ತಿರಲಿಲ್ಲ. ರಾಜ್ಯದ ಯಾವುದೇ ಶಾಸಕರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದರೆ ಅದಕ್ಕೆ ಅವಕಾಶ ಕೊಡುತ್ತೇನೆ. ಪಕ್ಷಬೇಧ ಮರೆತು, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತೇನೆ. ಸರ್ಕಾರಕ್ಕೆ ಮಾರ್ಗದರ್ಶನ ಕೊಡುವ ಕೆಲಸ ಮಾಡುತ್ತೇನೆ. ಶಾಸಕರೂ ಹೆಚ್ಚಿನ ಸಂಖ್ಯೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದರು.