ಸಿಎಂ ಸಿದ್ದರಾಮಯ್ಯ ಐದು ವರ್ಷ ಪೂರ್ಣಗೊಳಿಸ್ತಾರೆಂಬ ಚರ್ಚೆ ಜೋರಾಗಿಯೇ ಸದ್ದುಮಾಡ್ತಿದೆ.ಐದು ವರ್ಷ ಪೂರ್ಣಗೊಳಿಸಿದ್ರೆ,ರಾಜ್ಯದಲ್ಲಿ ಅದೊಂದು ಮಹತ್ವದ ದಾಖಲೆಯಾಗಲಿದೆ ಅನ್ನೋ ಮಾತು ಕೇಳಿಬರ್ತಿದೆ.ಅದಕ್ಕೆ ಪೂರಕವಾಗಿ ಹಲವು ಸಚಿವರು ಬೆಂಬಲವ್ಯಕ್ತಪಡಿಸ್ತಿದ್ದಾರೆ.ಅರಸು ನಂತರ ಅತಿಹೆಚ್ಚು ಆಡಳಿತ ನಡೆಸಿದ ಖ್ಯಾತಿ ಅವರದಾಗಲಿದೆ,ನಾವು ಕೂಡ ಅದಕ್ಕೆ ಹಾರೈಸ್ತೇವೆಂದು ಹೇಳ್ತಿದ್ದಾರೆ.
ಇದು ಸಿಎಂ ಕುರ್ಚಿಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆಶಿಗೆ ದೊಡ್ಡ ಸೆಟ್ ಬ್ಯಾಕ್ ಆಗಲಿದೆ.ಹಲವು ಸಚಿವರು ಬಹಿರಂಗವಾಗಿಯೇ ಈ ಹೇಳಿಕೆ ನೀಡ್ತಿರೋದ್ರಿಂದ ಅವರ ಒಲವು ಡಿಕೆಶಿ ಕಡೆಗಿಲ್ಲ ಸಿದ್ದರಾಮಯ್ಯ ಕಡೆ ಇದೆ ಅನ್ನೋದನ್ನ ತೋರಿಸ್ತಿದೆ. ಹಾಗಾದ್ರೆ ಏನಿದು ರಾಜಕೀಯ ಲೆಕ್ಕಾಚಾರ ಅಂತೀರ..ಈ ಸ್ಟೋರಿ ನೋಡಿ.
ಯೆಸ್..ಇನ್ನೇನು ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿತಾರೆ..ಒಪ್ಪಂದದಂತೆ ಡಿಸಿಎಂ ಡಿಕೆಶಿಗೆ ಆಸ್ಥಾನವನ್ನ ಬಿಟ್ಟುಕೊಡ್ತಾರೆ ಅನ್ನೋ ಚರ್ಚೆ ಕಳೆದ ಮೂರ್ನಾಲ್ಕು ತಿಂಗಳಿಂದ ನಡೆದಿದೆ..ಪದೇ ಪದೇ ಹಲವುಸಚಿವರು ಈ ವಿಚಾರದಲ್ಲಿ ಹೇಳಿಕೆ ನೀಡುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆಮುಜುಗರವೂ ಎದುರಾಗಿತ್ತು..ಹೈಕಮಾಂಡ್ ಮಧ್ಯ ಪ್ರವೇಶಿಸಿ ಬಹಿರಂಗ ಹೇಳಿಕೆ ನೀಡ್ತಿದ್ದವರಿಗೆ ಬ್ರೇಕ್ ಹಾಕಿದ್ದರು..ಆದ್ರೆ ಇದೀಗ ಮತ್ತೆ ಸಿಎಂ ಕುರ್ಚಿ ಬದಲಾವಣೆಯ ವಿಚಾರ ಒಳಗೊಳಗೇ ಸದ್ದುಮಾಡ್ತಿದೆ..
ಡಿಕೆಶಿ ಹೈಕಮಾಂಡ್ ಮೇಲೆ ಒತ್ತಡ ತರುವ ಮೂಲಕ ಅದನ್ನ ಪಡೆಯೋಕೆ ಪ್ರಯತ್ನನಡೆಸ್ತಿದ್ದಾರೆಂಬ ಮಾತುಗಳಿವೆ..ಇಂತಹ ಸಂದರ್ಭದಲ್ಲೇ ಮತ್ತೆ ಸಿಎಂ ಸಿದ್ದರಾಮಯ್ಯ ಮುಂದುವರಿಕೆ ಹಲವು ಸಚಿವರು ಬೆಂಬಲಿಸ್ತಿದ್ದಾರೆ..ಐದು ವರ್ಷ ಪೂರ್ಣ ಅಧಿಕಾರ ನಡೆಸಿದ್ರೆ ದೇವರಾಜ ಅರಸರ ದಾಖಲೆಯನ್ನ ಹಿಂದಿಕ್ಕಬಹುದೆಂದು ಸಚಿವರೇ ಸಿದ್ದರಾಮಯ್ಯಗೆ ಹಾರೈಸ್ತಿದ್ದಾರೆ..ಈ ಮೂಲಕ ಪರೋಕ್ಷವಾಗಿ ಡಿಕೆಶಿಗೆ ಸಿಎಂ ಕುರ್ಚಿ ಸಿಗಬಾರದೆಂದು ತಡೆಯೊಡ್ಡುತ್ತಿದ್ದಾರೆ..
ಗೃಹ ಸಚಿವ ಪರಮೇಶ್ವರ್ ಕೂಡ ಸಿಎಂ ಕುರ್ಚಿಗೆ ಪ್ರಬಲ ಆಕಾಂಕ್ಷಿ..ಒಂದು ವೇಳೆ ಡಿಕೆಶಿಗೆ ಸಿಎಂ ಕುರ್ಚಿ ಬಿಟ್ಟುಕೊಡುವ ಪ್ರಮೇಯ ಬಂದ್ರೆ ಆಗ ದಲಿತ ಸಿಎಂ ದಾಳ ಉರುಳಿಸಿ ನಾನು ಸಿಎಂ ಆಗ್ಬೇಕು ಅಂತ ಕನಸು ಕಾಣ್ತಿದ್ದಾರೆ..ಇದಕ್ಕೆ ಸಿದ್ದರಾಮಯ್ಯ ಸಪೋರ್ಟ್ ಕೂಡ ಇದೆ..ಹಾಗಾಗಿಯೇ ಸಿದ್ದರಾಮಯ್ಯ ಆಪ್ತರೆಲ್ಲರೂ ಪರಮೇಶ್ವರ್ ಜೊತೆ ನಿಂತಿದ್ದಾರೆ..
ಸಿದ್ದರಾಮಯ್ಯ ಪೂರ್ಣಾವಧಿಗೆ ಮುಂದುವರಿಸಿ,ಇಲ್ಲವೇ ನಮ್ಮಲ್ಲಿ ಒಬ್ಬರನ್ನ ಕನ್ಸಿಡರ್ ಮಾಡಿ ಅನ್ನೋ ಡಿಮ್ಯಾಂಡ್ ಇವರದ್ದು..ಹಾಗಾಗಿಯೇ ಒಳಗೊಳಗೆ ಪ್ರಯತ್ನ ಮುಂದುವರಿಸಿದ್ದಾರೆ..ಇನ್ನು ಡಿಕೆಶಿ ಸಿಎಂ ಆದ್ರೆ ನಮ್ಮನ್ನೆಲ್ಲ ಮೂಲೆಗುಂಪು ಮಾಡ್ತಾರೆ ಅನ್ನೋ ಭಯ ಕೆಲವರಿಗೆ..ಹಾಗಾಗಿ ಸಿದ್ದರಾಮಯ್ಯನೇ ಮುಂದುವರಿಯಬೇಕು ಅಂತ ಪರೋಕ್ಷವಾಗಿ ಸಂದೇಶ ರವಾನಿಸ್ತಿದ್ದಾರೆ..ಈ ಕಾರಣಕ್ಕೆ ಎಲ್ಲರೂ ಪೂರ್ಣಾವಧಿ ಅವರಿದ್ದರೆ ಒಳ್ಳೆಯದು ಅಂತ ಸಿಎಂ ಪರ ಬ್ಯಾಟ್ ಬೀಸ್ತಿದ್ದಾರೆ..ಪರಮೇಶ್ವರ್ ಅವರೇ ಐದು ವರ್ಷ ಮುಂದುವರಿಯಲಿ ನಾನು ಹಾರೈಸ್ತೇನೆ ಎಂದಿದ್ದಾರೆ..
ನಿಮಗೆ ಗೊತ್ತೆ..? ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ ಪಕ್ಕಾ ಹೆಲ್ಪ್ ಮಾಡುತ್ತೆ..!
ಜೊತೆಗೆ ಎರಡೂವರೆ ವರ್ಷ ಅವರು ಇವರು ಅಂತ ಎಲ್ಲಿಯೂ ಒಪ್ಪಂದವಾಗಿಲ್ಲ.ಅದರ ಬಗ್ಗೆ ನಮಗ್ಯಾರಿಗೂಮಾಹಿತಿ ಇಲ್ಲವೆನ್ನುವ ಮೂಲಕ ಡಿಕೆಶಿಗೂ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ..ಇನ್ನು ಎಂಬಿ ಪಾಟೀಲ್ ಸಿದ್ರಾಮಯ್ಯ ೧೦ ವರ್ಷ ಪೂರ್ಣಾವಧಿ ಸಿಎಂ ಆಗಿರ್ತಾರೆ ಅಂತ ಬಹಿರಂಗವಾಗಿಯೇ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ..ಸಿಎಂ ಕುರ್ಚಿ ಖಾಲಿ ಇಲ್ಲ,ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಬಾರಿಯೂ ನಾವು ಅಧಿಕಾರಕ್ಕೆ ಬರ್ತೇವೆ ಅಂತ ನೇರವಾಗಿಯೇ ಅವರು ಡಿಕೆಶಿ ಆಸೆಗೆ ತಣ್ಣೀರೆರಚಿದ್ದಾರೆ..
ಇನ್ನು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪ್ರಯತ್ನ ನಡೆಸಿರುವ ಸತೀಶ್ ಜಾರಕಿಹೊಳಿ ಕೂಡ ಸಿಎಂ ಪರ ಬ್ಯಾಟ್ ಬೀಸಿದ್ದಾರೆ..ಡಿಕೆ ಸುರೇಶ್ ಅವರೇ ಐದು ವರ್ಷ ಪೂರೈಸ್ತಾರೆ ಅಂತ ಹೇಳಿದ್ದಾರೆ..ಅದೇ ರೀತಿ ಎಲ್ಲರ ಅಭಿಪ್ರಾಯವೂ ಅದೇ ಆಗಿದೆ,ತಕ್ಷಣ ಹೇಳಿದ್ರೆ ಏನೂ ಆಗಲ್ಲ ಹೈಕಮಾಂಡ್ ಏನುಮಾಡುತ್ತೆ ನೊಡೋಣ ಎಂದಿದ್ದಾರೆ..ಅತ್ತ ಸಚಿವ ಮಹದೇವಪ್ಪ ಸಿಎಂ ಪೂರ್ಣಾವಧಿ ಇರಬೇಕೆಂಬ ಆಸೆ ವ್ಯಕ್ತಪಡಿಸಿರೋದ್ರಲ್ಲಿ ಯಾವ ಡೌಟಿದೆ ಅಂತ ಪ್ರಶ್ನಿಸಿದ್ದಾರೆ..ಸಾರ್ವಜನಿಕ ಜೀವನದಲ್ಲಿ ನಿವೃತ್ತಿ ಇಲ್ಲ,ಇದೇನು ಸರ್ಕಾರಿ ಕೆಲಸವೇ,ಜನರಿಗಾಗಿ ಕೆಲಸ ಮಾಡುವಾಗ ರಿಟೈರ್ ಮೆಂಟ್ ಇರೋದಿಲ್ಲ ಅಂತ ನೇರವಾಗಿಯೇ ಸಿಎಂ ಪರ ಒಲವು ತೋರಿದ್ದಾರೆ..
ಒಟ್ನಲ್ಲಿ ಪೂರ್ಣಾವಧಿ ಅಧಿಕಾರ ಮುಗಿಸಬೇಕೆಂಬ ಸಿಎಂ ಆಸೆಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ..ಡಿಕೆಶಿ ಸಿಎಂ ಆಗೋದನ್ನ ತಪ್ಪಿಸೋಕೆ ಈ ಅಸ್ತ್ರವನ್ನ ಪ್ರಯೋಗಿಸಿದಂತೆ ಕಾಣ್ತಿದೆ..ಅದಕ್ಕೆ ಪೂರಕವಾಗಿ ಸಚಿವರೆಲ್ಲರೂ ಸಿಎಂ ಪರವೇ ಬ್ಯಾಟ್ ಬೀಸ್ತಿದ್ದಾರೆ..ಈ ಮೂಲಕ ನಾವೆಲ್ಲರು ಸಿದ್ದರಾಮಯ್ಯ ಪರ ಅನ್ನೋ ಸಂದೇಶವನ್ನೇನಾದ್ರೂ ಹೈಕಮಾಂಡ್ ಗೆ ರವಾನಿಸ್ತಿದ್ದಾರಾ ಹೇಗೆ..ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ..ಹೈಕಮಾಂಡ್ ಈ ವಿಷಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಕಾದು ನೋಡ್ಬೇಕಿದೆ..