ಬೆಂಗಳೂರು: ಬೆಂಗಳೂರಿನ ಆರ್.ಟಿ ನಗರದ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಸಚಿವ ಡಾ.ಕೆ ಸುಧಾಕರ್ ಭೇಟಿ ನೀಡಿದರು. ಈ ವೇಳೆ ಸಾಹಾರ್ದಯುತವಾಗಿ ಮಾತನಾಡಿ ಸಿಎಂ ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಬಳಿಕ ಮಾತನಾಡಿದ ಸಚಿವ ಡಾ.ಕೆ ಸುಧಾಕರ್ ಅವರು ಕೊರೊನಾ ಬಿಕ್ಕಟ್ಟು ಸೇರಿದಂತೆ ಅನೇಕ ಸವಾಲುಗಳ ನಡುವೆಯೂ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಮುನ್ನಡೆಸುತ್ತಿರುವ ಮುಖ್ಯಮಂತ್ರಿಗಳಿಗೆ ಭಗವಂತ ಇನ್ನಷ್ಟು ಶಕ್ತಿ ನೀಡಲಿ, ಹೊಸ ವರ್ಷ 2022 ಎಲ್ಲರಿಗೂ ಒಳಿತು ತರಲಿ ಎಂದು ಶುಭ ಹಾರೈಸಿದರು.
