ಬಾಗಲಕೋಟೆ: ಕೇಂದ್ರದ ಜಿಎಸ್‌ಟಿ ತೆರಿಗೆಯನ್ನು ಕಾಟನ್ ಸೀರೆಗಳ ಉತ್ಪಾದನೆ ಮೇಲೆ ಶೇ.5 ರ ಬದಲಾಗಿ ಶೇ.12 ಕ್ಕೆ ಏರಿಕೆ ಮಾಡಿರುವದನ್ನು ಬಲವಾಗಿ ಖಂಡಿಸಿ. ಜನವರಿ 1 ರಂದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಲಕ್ಷಾಂತರ ನೇಕಾರರು ಬಂದ್ ಕರೆ ನೀಡಿದ್ದಾರೆ ಸಂಜೆ ಬನಹಟ್ಟಿಯಲ್ಲಿ ಜರುಗಿದ ನೇಕಾರ ಮುಖಂಡರ ದಿಢೀರ್ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ರಾಜ್ಯಮಟ್ಟದಲ್ಲಿ ನೇಕಾರರ ಸ್ಥಿತಿ-ಗತಿ ಹಾಗು ಅಳಿವು-ಉಳಿವಿನ ಪ್ರಶ್ನೆಯಾಗಿದ್ದು,
ತೆರಿಗೆ ಹೆಚ್ಚಳ ವಿರೋಧಿಸಿ ಶನಿವಾರ ಬೆಳಿಗ್ಗೆ 9 ಗಂಟೆಗೆ ನಗರದ ಈಶ್ವರಲಿಂಗ ಮೈದಾನದಲ್ಲಿ ಎಲ್ಲ ನೇಕಾರರು ಭಾಗವಹಿಸಲಿದ್ದು, ತಹಶೀಲ್ದಾರ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸದಾಗಿ ರಾಜ್ಯ ನೂಲಿನ ಗಿರಣಿ ಮಹಾ ಮಂಡಳದ ಉಪಾಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದ್ದಾರೆ.ಈಗಾಗಲೇ ಸೂರತ್, ಬೇವೂಂಡಿ ಸೇರಿದಂತೆ ದೇಶದ ಬಹುತೇಕ ರಾಜ್ಯಗಳ ನೇಕಾರರು ಬಂದ್ ಘೋಷಣೆಯೊಂದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಕರ್ನಾಟಕ ರಾಜ್ಯದಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಮಲ್ಲಿಕಾರ್ಜುನ ಬಾಣಕಾರ, ಶಂಕರ ಸೊರಗಾಂವಿ, ಬ್ರಿಜ್‌ಮೋಹನ ಡಾಗಾ, ಸುರೇಶ ಚಿಂಡಕ, ಬಸವರಾಜ ಜಾಡಗೌಡ, ನೀಲಕಂಠ ಮುತ್ತೂರ, ಪ್ರಭು ಕರಲಟ್ಟಿ, ಶಂಕರ ಟಿರ್ಕಿ, ಗಟ್ಟು ಮಾಲಪಾನಿ, ಗಂಗಾಧರ ಕೊಕಟನೂರ, ಮಲ್ಲು ಭದ್ರನ್ನವರ, ಚಂದ್ರು ಕುಲಗೋಡ, ಗಿರಮಲ್ಲಪ್ಪ ಬಾಗೇವಾಡಿ, ಈರಪ್ಪ ಇಟ್ನಾಳ ಸೇರಿದಂತೆ ಅನೇಕರಿದ್ದರು.
ಪ್ರಕಾಶ ಕುಂಬಾರ
Ain ನ್ಯೂಸ್ 24 ಕನ್ನಡ
ಬಾಗಲಕೋಟೆ