ನ್ಯೂಯಾರ್ಕ್: ಮಗು ಬೇಡದಿದ್ದರೂ ಸಂಭೋಗದ ವೇಳೆ ಸ್ಖಲನ ಮಾಡುವ ಗಂಡಸರಿಗೆ ಅಮೆರಿಕಾ ಸರ್ಕಾರ ಭಾರಿ ಶಾಕ್ ನೀಡಿದ್ದು, ಲಕ್ಷ ಲಕ್ಷ ದಂಡ ವಿಧಿಸಲು ಮುಂದಾಗಿದೆ.
ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ಹೊಸ ಹೊಸ ಕಾನೂನನ್ನು ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ಇದು ಒಂದು. ಅಮೆರಿಕದಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಓಹಿಯೋ ಮಸೂದೆಯಡಿಯಲ್ಲಿ ಪುರುಷರು ಮಗುವನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ತಮ್ಮ ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಸ್ಖಲನ ಮಾಡಿದರೆ ಅವರಿಗೆ 1 ಸಾವಿರ ಡಾಲರ್ನಿಂದ 10,000 ಡಾಲರ್ವರೆಗೆ ದಂಡ ಹೇರಲಾಗುತ್ತದೆ ಎಂದು ಹೇಳಲಾಗಿದೆ.
ಈ ಪ್ರಸ್ತಾವಿತ ಮಸೂದೆಯ ಪ್ರಕಾರ, ಮಗುವಿಗಾಗಿ ಗರ್ಭಧರಿಸುವ ಉದ್ದೇಶವಿಲ್ಲದೆ ಸಂಭೋಗದ ವೇಳೆ ಸ್ಖಲನ ಮಾಡಿದರೆ ಪುರುಷರಿಗೆ ದಂಡ ಹೇರಲಾಗತ್ತದೆಯಂತೆ. ಮೊದಲ ಬಾರಿ ಈ ತಪ್ಪು ಮಾಡುವ ಪುರುಷರಿಗೆ 1,000, ಡಾಲರ್ (87 ಸಾವಿರ ರೂ.) ಎರಡನೇ ಬಾರಿಗೆ 5,000 ಡಾಲರ್ ಮತ್ತು ನಂತರದ ಅಪರಾಧಕ್ಕಾಗಿ 10,000 ಡಾಲರ್ (8.66 ಲಕ್ಷ ರೂ.) ದಂಡ ತೆರಬೇಕಾಗುತ್ತದೆ ಎಂದು ಹೇಳಲಾಗಿದೆ.
ಓಹಿಯೋದ ಇಬ್ಬರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಶಾಸಕರು ಪ್ರಸ್ತಾಪಿಸಿದ ಮಸೂದೆಯು ಮಕ್ಕಳನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ಲೈಂಗಿಕ ಕ್ರಿಯೆಯ ವೇಳೆ ಮಹಿಳೆಯ ಯೋನಿಯೊಳಗೆ ಸ್ಖಲಿಸುವ ‘ಅಪರಾಧ’ಕ್ಕಾಗಿ ಪುರುಷನಿಗೆ 1000 ಅಮೆರಿಕನ್ ಡಾಲರ್ ದಂಡ ವಿಧಿಸಲು ಪ್ರಸ್ತಾಪಿಸಿದೆ. ಕ್ರಮೇಣ ಈ ದಂಡವನ್ನು 5000 ಡಾಲರ್ ಮತ್ತು ಅಂತಿಮವಾಗಿ 10,000 ಡಾಲರ್ಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಡೆಮಾಕ್ರಟಿಕ್ ಪಕ್ಷದ ಶಾಸಕರಾದ ಅನಿತಾ ಸೋಮಾನಿ ಮತ್ತು ಟ್ರಿಸ್ಟಾನ್ ರೇಡರ್ ಅವರು ಈ ಮಸೂದೆಯನ್ನು ಪ್ರಸ್ತಾಪಿಸಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ.