ರಾಜಸ್ಥಾನ: ಭಾರತೀಯ ವಾಯುಪಡೆಯ ಫೈಟರ್ ಜೆಟ್ ಮಿಗ್-21 ಯುದ್ಧ ವಿಮಾನ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪತನಗೊಂಡಿದ್ದು, ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಹುತಾತ್ಮರಾಗಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ.ಜೈಸಲ್ಮೇರ್‌ನ ಬಳಿಯ ಭಾರತ-ಪಾಕ್ ಗಡಿ ಸಮೀಪದ ಗ್ರಾಮವೊಂದರ ಬಳಿ ದುರ್ಘಟನೆ ಸಂಭವಿದ್ದು,
ಸ್ಥಳಕ್ಕೆ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ ಸುಮಾರು 8.30ರ ವೇಳೆಗೆ ವಾಯುಪಡೆ ಪಶ್ಚಿಮ ವಲಯದಲ್ಲಿ ತರಬೇತಿ ಪಡೆಯುತ್ತಿದ್ದ ಫೈಟರ್ ಜೆಟ್ ಪತನವಾಗಿದ್ದು, ಮೃತಪಟ್ಟ ವಿಂಗ್ ಕಮಾಂಡರ್ ಅವರ ಕುಟುಂಬಕ್ಕೆ ವಾಯುಪಡೆ ಸಂತಾಪ ಸೂಚಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
