ಬೆಂಗಳೂರು:- ಮೆಟ್ರೋ ಟಿಕೆಟ್ ದರ ದುಬಾರಿ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೆ ಸಿಡಿದೆದ್ದ ಕಿಯೋನಿಕ್ಸ್ ವೆಂಡರ್ಸ್: ವಿಷ ಕುಡಿಯುವ ಪ್ರತಿಭಟನೆಗೆ ಕರೆ!
ಈ ಸಂಬಂಧ ಮಾತನಾಡಿದ ಅವರು, ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಯೋಚನೆ ಮಾಡಬೇಕು. ಮೆಟ್ರೋ ಅಂದರೆ ಜಾಸ್ತಿ ಅನುದಾನ ಕೊಡುತ್ತಾರೆ. ಸಾವಿರಾರು ಕೋಟಿ ಖರ್ಚು ಮಾಡುತ್ತಾರೆ. ಮೆಟ್ರೋದಲ್ಲಿ 8-9 ಲಕ್ಷ ಜನ ಮಾತ್ರ ನಿತ್ಯ ಓಡಾಟ ಮಾಡುತ್ತಾರೆ. ಮೆಟ್ರೋ ಜಾಲ ಜಾಸ್ತಿ ವಿಸ್ತರಣೆ ಆಗಲಿ. ಆದರೆ ಮೆಟ್ರೋ ಕೊಡುವ ಅಷ್ಟು ಅನುದಾನ ಬಿಎಂಟಿಸಿಗೂ ಕೊಡಲಿ. ಬಿಎಂಟಿಸಿಯಲ್ಲಿ ನಿತ್ಯ 40 ಲಕ್ಷ ಜನ ಓಡಾಟ ಮಾಡುತ್ತಾರೆ. ಬಿಎಂಟಿಸಿಗೆ ಹೆಚ್ಚು ಆದ್ಯತೆ ಕೊಟ್ಟರೆ ಜನಕ್ಕೆ ಅನುಕೂಲ ಆಗುತ್ತದೆ ಎಂದರು.
ಮೆಟ್ರೋ ಟಿಕೆಟ್ ದರ ಏರಿಕೆಗೆ ಏನು ಕಾರಣ ಅಂದರೆ ಬಿಎಂಟಿಸಿ, ಬಿಡಬ್ಲ್ಯೂಎಸ್ಎಸ್ಬಿ, ಬಿಡಿಎ, ಕೆಇಬಿ ಎಲ್ಲಾ ಸಂಸ್ಥೆಗಳು ಉಳಿಬೇಕು. ಈ ಸಂಸ್ಥೆಗಳು ಲಾಭ ಮಾಡೋದು ಬೇಡ. ಕೊನೆ ಪಕ್ಷ ಲಾಭ-ನಷ್ಟ ಇಲ್ಲದೇ ಸಮವಾಗಿ ನಡೆದುಕೊಂಡು ಹೋದರೆ ಸಾಕು. ಕಡಿಮೆ ದರದಲ್ಲಿ ಮೆಟ್ರೋ ಓಡಿಸಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಬ್ಸಿಡಿ ಕೊಡಬೇಕಾಗುತ್ತದೆ. ಸಬ್ಸಿಡಿ ಕೊಟ್ಟರೆ ಕಡಿಮೆ ದರದಲ್ಲಿ ಹೋಗಬಹುದು. ಮೆಟ್ರೋ ಟಿಕೆಟ್ ಏರಿಕೆಯಿಂದ ಪ್ರಯಾಣಿಕರು ಇಳಿಮುಖವಾಗಬಹುದು. ಆಗ ನಮ್ಮ ಬಸ್ಗೆ ಹೋಗುತ್ತಾರೆ ಅಥವಾ ಅವರ ವಾಹನಗಳಲ್ಲಿ ಓಡಾಡುತ್ತಾರೆ ಅಷ್ಟೇ ಎಂದು ಹೇಳಿದರು.