ಬೆಂಗಳೂರು:- ಮೆಟ್ರೋ ಟಿಕೆಟ್ ದರ ಏರಿಕೆ ನಾವು ಮಾಡಿದ್ದೇವೆ ಎನ್ನುವುದು ತಪ್ಪು. ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಗಾಳಿಯಲ್ಲಿ ತೇಲುವ ಶಿವಲಿಂಗ: ಮಹಾ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು!?
ಈ ಸಂಬಂಧ ಮಾತನಾಡಿದ ಅವರು, ಮೆಟ್ರೋ ಯೋಜನೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಟಿಕೆಟ್ ದರ ಏರಿಕೆ ಸಮಿತಿ ಇರುವುದು ದೆಹಲಿಯಲ್ಲಿ ಅಲ್ಲ. ಮೆಟ್ರೋ ಸಂಬಂಧ ಎಲ್ಲಾ ಜವಾಬ್ದಾರಿಗಳೂ ರಾಜ್ಯಕ್ಕೆ ಬರಲಿದೆ. ದರ ನಿಗದಿ ಸಮಿತಿ ಇರೋದು ಕರ್ನಾಟಕದಲ್ಲಿ, ದೆಹಲಿಯಲ್ಲಿ ಅಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ. ಮೆಟ್ರೋ ಕುರಿತು ಎಲ್ಲಾ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರ ಇದೆ. ದರ ಏರಿಕೆ ಪ್ರಸ್ತಾವನೆ ಕೊಟ್ಟಿದ್ದೇ ರಾಜ್ಯ ಸರ್ಕಾರ. ರಾಜ್ಯ ಸರ್ಕಾರವೇ ಮೆಟ್ರೋ ಸಂಬಂಧ ಎಲ್ಲಾ ವಿಚಾರಗಳಿಗೂ ಕಾರಣ. ಕೇಂದ್ರ ಸರ್ಕಾರದಿಂದ ದರ ಏರಿಕೆಗೆ ಸೂಚನೆ ಕೊಟ್ಟಿಲ್ಲ, ಇದು ತಪ್ಪು ಆರೋಪ ಎಂದಿದ್ದಾರೆ.