ಬೆಂಗಳೂರು: ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ ಗೆ ಸಂಪರ್ಕ ಕಲ್ಪಿಸುವ ಮೊಟ್ರೊ ರೈಲು ಮಾರ್ಗದ ಕಾಮಗಾರಿ ಚುರುಕುಗೊಂಡಿದೆ. 2022 ರ ಡಿಸೆಂಬರ್ ವೇಳೆಗೆ ರೈಲುಗಳ ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಉದ್ದೇಶಿಸಿದೆ.
ಅಲ್ಲದೆ, ರೀಚ್-1 ಮಾರ್ಗ ವಿಸ್ತರಿತ ಮಾರ್ಗ ಇದಾಗಿದ್ದು, ಕಾಮಗಾರಿ ಪೂರ್ಣಗೊಂಡರೆ ಕೆಂಗೇರಿಯಿಂದ ವೈಟ್ ಪೀಲ್ಡ್ ಗೆ ನಿರಂತರ ಮೆಟ್ರೊ ಸಂಪರ್ಕ ದೊರೆತಂತಾಗಲಿದೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ ಇನ್ನು ನಗರದ ಅನೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವಲ್ಲಿ ಈ ಮೆಟ್ರೊ ಮಾರ್ಗ ಮಹತ್ವದ ಪಾತ್ರವಹಿಸಲಿದೆ.
