ನಟಿ ಲೀಲಾವತಿ (Leelavathi) ಅವರ ನಿಧನಕ್ಕೆ ಹಿರಿಯ ನಟ ಅನಂತ್ ನಾಗ್ (Ananth Nag) ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರನ್ನ ನನ್ನ ಎರಡನೇ ತಾಯಿಯ ರೂಪದಲ್ಲಿ ನೋಡಿದ್ದೀನಿ ಎಂದು ಅನಂತ್ನಾಗ್ ಅವರು ಲೀಲಾವತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರೊಂದಿಗಿನ ಒಡನಾಟದ ದಿನಗಳನ್ನ ಅನಂತ್ನಾಗ್ ಸ್ಮರಿಸಿದ್ದಾರೆ.
ನನ್ನ ಬದುಕಿನಲ್ಲಿ ಲೀಲಾವತಿ ಅವರನ್ನ ನನ್ನ ಎರಡನೇ ತಾಯಿಯ ರೂಪದಲ್ಲಿ ನೋಡಿದ್ದೀನಿ. ಅದೇ ರೀತಿಯ ಪ್ರೀತಿ ಮತ್ತು ಗೌರವವನ್ನು ಕೊಟ್ಟಿದ್ದೀನಿ. ಅವರ ಜೊತೆ ಸುಮಾರು 50 ವರ್ಷಗಳಿಂದ ನಟಿಸಿದ ನೆನಪುಗಳಿವೆ ಎಂದಿದ್ದಾರೆ ಅನಂತ್ನಾಗ್. ಕೆಲದಿನಗಳಿಂದ ಅವರಿಗೆ ಅನಾರೋಗ್ಯ ಎಂದು ತಿಳಿದಾಗ,
ನಾನು ಮತ್ತು ನನ್ನ ಪತ್ನಿ ಗಾಯಿತ್ರಿ ಅವರ ಮನೆಗೆ ಲೀಲಾವತಿ ಅಮ್ಮನವರೊಂದಿಗೆ 4-5 ಗಂಟೆಗಳ ಕಾಲ ಕಳೆದಿದ್ದೇನೆ ಎಂದು ಮಾತನಾಡಿದ್ದಾರೆ. ನಿನ್ನೆ ಅವರ ನಿಧನದ ಸುದ್ದಿ ಕೇಳಿದಾಗ ಬೇಜಾರಾಯ್ತು. ನನಗೆ ಮೊದಲು ಅವರು ಸಿಕ್ಕಿದ್ದೆ, ನನ್ನ ಸಿನಿಮಾದ ತಾಯಿಯ ಪಾತ್ರದಲ್ಲಿ ಆಮೇಲೆ ಸಹೋದರಿಯಾಗಿ ನಟಿಸಿದ್ದಾರೆ. ನನ್ನ ಜೊತೆ ಲೀಲಾವತಿ ಅವರು 35ರಿಂದ 40 ಸಿನಿಮಾಗಳನ್ನ ಮಾಡಿದ್ದಾರೆ ಎಂದು ಅನಂತ್ ನಾಗ್ ಹೇಳಿದ್ದಾರೆ.