ಮ್ಯಾಥ್ಯೂಸ್ ಟೈಮ್ಡ್ ಔಟ್ ವಿವಾದದ ಬಗ್ಗೆ ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಆಟಗಾರ ಕೂಡ ನಿಯಮ ಪಾಲನೆ ಮಾಡುವುದು ಅಗತ್ಯ ನಿಯಮ ಪಾಲಿಸಿದ್ದಕ್ಕಾಗಿ ಯಾರನ್ನೂ ದೂರಬಾರದು ಎಂದು ಹೇಳಿದ್ದಾರೆ. ಈ ಮೂಲಕ ಟೈಮ್ಡ್ ಔಟ್ ತೀರ್ಪಿಗೆ ಮನವಿ ಸಲ್ಲಿಸಿದ ಬಾಂಗ್ಲಾ ನಾಯಕ ಶಕೀಬ್ ನಿರ್ಧಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ.
‘ಎಲ್ಲರೂ ಭಿನ್ನ ಯೋಚನೆ ಹೊಂದಿರುತ್ತಾರೆ. ನಾವೆಲ್ಲರೂ ವಿಚಿತ್ರ ಪ್ರಾಣಿಗಳು. ನಾವೆಲ್ಲರೂ ನಮ್ಮದೇ ಆದ ರೀತಿಯಲ್ಲಿ ಯೋಚಿಸುತ್ತೇವೆ. ನಿಜವಾದ ರೀತಿಯಲ್ಲಿ ಸರಿ ಅಥವಾ ತಪು$್ಪ ಎಂಬುದು ಯಾವುದೂ ಇರುವುದಿಲ್ಲ. ಭಿನ್ನ ಯೋಚನೆ ಹೊಂದಿರುವುದು ಕೂಡ ತಪ್ಪಲ್ಲ. ಯಾರಾದರೂ ನಿಯಮ ಪ್ರಕಾರ ನಡೆದುಕೊಳ್ಳಲು ಬಯಸಿದರೆ ಅದನ್ನು ದೂರುವಂತಿಲ್ಲ. ನೀವು ಬೇಕಿದ್ದರೆ ಅದರಂತೆ ನಡೆದುಕೊಳ್ಳಬೇಕಾಗಿಲ್ಲ. ಆದರೆ ಅದಕ್ಕಾಗಿ ಬೇರೆಯವರನ್ನು ದೂರುವುದು ಸರಿಯಲ್ಲ’ ಎಂದು ದ್ರಾವಿಡ್ ಹೇಳಿದ್ದಾರೆ.