ಬಳ್ಳಾರಿ: ಸ್ಪಾಂಜ್ ಐರನ್ ಕಾರ್ಖಾನೆ ಬಂದ್ʼಗೆ ಆಗ್ರಹಿಸಿ ರೈತರಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳ್ಳಾರಿಯ ಡಿಸಿ ಕಛೇರಿ ಮುಂದೆ ಗ್ರಾಮಸ್ಥರು ಮತ್ತು ರೈತರಿಂದ ಪ್ರತಿಭಟನೆ ನಡೆಸಲಾಗಿದ್ದು, ಸಂಡೂರಿನ ರಣಜಿತ್‌ಪುರ್ ಗ್ರಾಮದ ಬಳಿ ಇರೋ ಸ್ವಾಂಜ್ ಐರನ್ ಪ್ಯಾಕ್ಟರಿಯಲ್ಲಿ ಕಾರ್ಖಾನೆಯಿಂದ ವಿಷಕಾರಿ ಅನಿಲ ಸೋರಿಕೆಯಿಂದ ಗ್ರಾಮಸ್ಥರ ಅನಾರೋಗ್ಯಕ್ಕೀಡಾಗುತ್ತಿದ್ದಾರೆ.
ಬೆಳೆದ ಬೆಳೆಗಳ ಮೇಲೆ ಧೂಳಿನ ರಾಶಿಯಿಂದ ರೋಷಿ ಹೋಗಿರುವ ಗ್ರಾಮಸ್ಥರು, ಹಲವು ಸಮಸ್ಯೆಗಳಿಗೆ ಕಾರಣವಾಗಿರುವ ರಣಜಿತ್ಪುರ್ ಸ್ಪಂಜ್ ಅಂಡ್ಯ್ ಐರನ್ ಫ್ಯಾಕ್ಟರಿಯಾಗಿದ್ದು, ಪರಿಸರ ಹಾನಿ ಮಾಡ್ತಿರೋ ಐರನ್ ಪ್ಯಾಕ್ಟರಿ ಬಂದ್‌ಗೆ ಆಗ್ರಹಿಸಿದ್ದಾರೆ.

ಡಿಸಿ ಕಛೇರಿ ಮುಂದೆ ಗ್ರಾಮಸ್ಥರ ಧರಣಿ, ಸ್ಪಾಂಜ್ ಐರನ್ ಕಾರ್ಖಾನೆ ಶಾಶ್ವತವಾಗಿ ಮುಚ್ಚುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಏರಲಾಗಿದ್ದು, ನೂರಾರು ಸಂಖ್ಯೆಯ ರೈತರು ಮತ್ತು ಗ್ರಾಮಸ್ಥರು ಬಳ್ಳಾರಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

