ಪಾರು ಧಾರವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದ ನಟಿ ಮಾನ್ಸಿ ಜೋಶಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕನ್ನಡದಿಂದ ತಮ್ಮ ಜರ್ನಿಯನ್ನು ಶುರು ಮಾಡಿದ ನಟಿ ಈಗ ಮಲಯಾಳಂ, ತೆಲುಗು, ತಮಿಳು ಧಾರಾವಾಹಿಯಲ್ಲಿ ಸಖತ್ ಸದ್ದು ಮಾಡುತ್ತಿರುವ ಮಾನ್ವಿ ಜೋಶಿ ಇದೀಗ ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಮಾನ್ವಿ ಜೋಶಿ, ರಾಘವ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರೇಂಜ್ ಕಮ್ ಲವ್ ಮ್ಯಾರೇಜ್ ಇದಾಗಿದ್ದು, ಸದ್ಯ ಮಾನ್ಸಿ ಜೋಶಿ ಹಾಗೂ ರಾಘವ್ ಹಳದಿ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಈ ಜೋಡಿಯ ಮದುವೆಗೆ ಮಾನ್ಸಿ ಕುಟುಂಬ ಒಪ್ಪಿತ್ತು. ಆದ್ರೆ ಕೆಲ ಕಾರಣಗಳಿಂದ ರಾಘವ್ ಅವರ ಕುಟುಂಬ ಮದುವೆ ನಿರಾಕರಿಸಿತ್ತಂತೆ. ಆದಾಗಲೇ ಪ್ರೀತಿಯಿಲ್ಲಿ ಬಿದ್ದಿದ್ದ ಈ ಜೋಡಿ ಇದೀಗ ಹಿರಿಯರನ್ನ ಒಪ್ಪಿಸಿ ಮದುವೆಯಾಗ್ತಿದ್ದಾರೆ.
ಈಗಾಗಲೇ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿರೋ ನಟಿ ಮಾನ್ಸಿ ರೋಮ್ಯಾಂಟಿಕ್ ಆಗಿ ಸಪ್ತಪದಿ ತುಳಿಯಲು ರೆಡಿ ಆಗುತ್ತಿದ್ದಾರೆ. ಇದೇ ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.