ಬೆಂಗಳೂರು: ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಪಂಚಗ್ಯಾರಂಟಿಗಳಲ್ಲಿ ಒಂದಾದ ಈ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮಂಗಳಮುಖಿಯರಿಗೆ ಇದುವರೆಗೂ ತಲುಪಿಲ್ಲ. ಇದರಿಂದಾಗಿ ಸರ್ಕಾರದ ವಿರುದ್ದ ಮಂಗಳಮುಖಿಯರು ಸಿಡಿದೆದ್ದಿದ್ದಾರೆ.
Udyoga Mela: ಬೆಂಗಳೂರಲ್ಲಿ ಫೆಬ್ರವರಿ 26 , 27ರಂದು ಬೃಹತ್ ಉದ್ಯೋಗ ಮೇಳ!
ಹೌದು. ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದಂತ ಗೃಹಲಕ್ಷ್ಮಿ ಯೋಜನೆ ಜುಲೈ ತಿಂಗಳಲ್ಲಿ ಆರಂಭವಾದ್ರೂ ಇನ್ನೂ ಸಾವಿರಾರು ಮಹಿಳೆಯರ ಖಾತೆಗೆ ಒಂದು ತಿಂಗಳ ಹಣವೂ ಜಮೆಯಾಗಿಲ್ಲ. ಮೊದಲಿಗೆ ರಾಜ್ಯದ ಮಹಿಳೆಯರಿಗೆ ಅಂತಿದ್ದ ಯೋಜನೆಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಣೆ ಮಾಡುವ ಭರವಸೆ ನೀಡಿತ್ತು. ಆದರೆ ಇಂದಿಗೂ ಯೋಜನೆಗೆ ನೋಂದಣಿಯಾಗಲಿ ಯೋಜನೆಯ ಲಾಭವೇ ಆಗಲಿ ಮಂಗಳಮುಖಿಯರಿಗೆ ತಲುಪಿಲ್ಲ. ಬೆಂಗಳೂರು ಒನ್, ಗ್ರಾಂ ಒನ್ ಗಳತ್ತ ಭೇಟಿ ಮಾಡಿದ ಮಂಗಳಮುಖಿಯರು ಯೋಜನೆಗೆ ನೋಂದಣಿ ಮಾಡಿಸಲಾಗದೆ ಮತ್ತೆ ವಾಪಸ್ ಆಗುತ್ತಿದ್ದಾರೆ. ಹೀಗಾಗಿ ಶೀಘ್ರ ಲಿಂಕ್ ಬಿಡುಗಡೆ ಮಾಡಿ ಅಂತ ಮಂಗಳಮುಖಿಯರು (Transgender) ಮನವಿ ಮಾಡ್ತಿದ್ದಾರೆ.
ಮಂಗಳಮುಖಿಯರ ಆಯ್ಕೆಯಲ್ಲಿ ನೋಂದಣಿ ಮಾಡಿಸಲು ಹೇಳಿದ್ದ ಸರ್ಕಾರ ಇದುವರೆಗೂ ಈ ಬಗ್ಗೆ ಗಮನಹರಿಸಿಲ್ಲ. ರೇಷನ್ ಕಾರ್ಡ್ (Ration Card) ಪಡೆಯುವಲ್ಲಿ ನಾವು ಹಿಂದೆ ಉಳಿದಿದ್ದೇವೆ. 44 ಸಾವಿರ ಮತದಾರರು ಇರುವ ನಮಗೆ ಸರ್ಕಾರದ ಸೌಲಭ್ಯ ಸಿಗ್ತಿಲ್ಲ ಅಂತಾ ಅಸಹಾಯಕತೆ ತೋಡಿಕೊಂಡಿದ್ದಾರೆ