ಮಂಡ್ಯ :- ಅನಧಿಕೃತವಾಗಿ ಖಾಸಗಿ ಕ್ಲಿನಿಕ್ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ದಾಳಿ ಮಾಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್ ಅನ್ನು ಮುಚ್ಚಿಸಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕಾಲುವೆ ರಸ್ತೆಯಲ್ಲಿ ಉತ್ತರಪ್ರದೇಶ ಮೂಲದ ಡಾ.ಧೀರಜ್ಕುಮಾರ್ ಎಂಬುವರು ಅನಧಿಕೃತವಾಗಿ ವೆಂಕಟೇಶ್ವರ ಖಾಸಗಿ ಕ್ಲಿನಿಕ್ ಅನ್ನು ನಡೆಸುತ್ತಿದ್ದರು ಈ ಸಂಬಂಧ ಡಿಎಚ್ಓ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು.
ಡಿಎಚ್ಓ ಸೂಚನೆ ಮೇರೆಗೆ ಸೋಮವಾರ ಕ್ಲಿನಿಕ್ಗೆ ದಿಡೀರ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಯಾವುದೇ ದಾಖಲೆಗಳಿಲ್ಲದೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕ್ಲಿನಿಕ್ ಅನ್ನು ಮುಚ್ಚಿಸಿದ್ದಾರೆ.
ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯರ ಬಳಿ ಬಿ.ಎ.ಎಂ.ಎಸ್. ಪದವಿ ಸರ್ಟಿಫಿಕೇಟ್, ಕ್ಲಿನಿಕ್ ನೋಂದಣಿ ಪತ್ರ ಇಲ್ಲದಿರುವುದು ಪತ್ತೆಯಾಗಿದೆ. ಬಯೋ ಮೆಡಿಕಲ್ ವೇಸ್ಟ್ ಅನ್ನು ವಿಲೇವಾರಿ ಮಾಡುವ ಬಗ್ಗೆಯೂ ವೈದ್ಯರ ಬಳಿ ಮಾಹಿತಿ ಇಲ್ಲ ಎಂದು ರವೀಂದ್ರ ಡಾ.ಗೌಡ ತಿಳಿಸಿದ್ದಾರೆ.
ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮೆಗೌಡ, ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ