ಪಂಜಾಬ್ ನಲ್ಲಿ ಪ್ರಧಾನಿ ಮೋದಿ ವಾಹನ ತಡೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರ ಜೊತೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್ ನಲ್ಲಿ ಮೋದಿ ವಾಹನ ತಡೆ ವಿಚಾರ ಮಾಧ್ಯಮದಲ್ಲಿ ತಪ್ಪು ಸಂದೇಶ ಹೋಗುತ್ತಿದೆ. ಭದ್ರತಾ ಲೋಪ ಆಗಿದ್ದು ಕೇಂದ್ರ ಸರ್ಕಾರದ್ದು, ಇನ್ನೂ ಪ್ರಧಾನಿ ಹೋಗುವುದಕ್ಕೂ ಮೊದಲೇ ಅಧಿಕಾರಿಗಳು ಜಾಗ ತಪಾಸಣೆ ಮಾಡುತ್ತಾರೆ. ಅಲ್ಲದೇ ಮೋದಿಯ ರ್ಯಾಲಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರಿರಲಿಲ್ಲ, 70 ಸಾವಿರ ಸೇರುವ ನಿರೀಕ್ಷೆ ಇತ್ತು, ಆದರೆ ಸೇರಿದ್ದು, 700 ಜನ ಮಾತ್ರ ಎಂದು ಹೇಳಿದರು. ಸರ್ಕಾರದ ಮಾಹಿತಿ ಪ್ರಕಾರ ಐದು ಸಾವಿರ ಅಂತ ಇದೆ. ಪೊಲೀಸ್ & ಅಧಿಕಾರಿಗಳು 10 ಸಾವಿರದಷ್ಟು ಇದ್ದರೂ, ಇದನ್ನು ನೋಡಿಯೇ ಮೋದಿ ಪ್ಲ್ಯಾನ್ ಚೇಂಜ್ ಮಾಡಿದ್ದರೂ ಎಂದು ಮಲ್ಲಿಕಾರ್ಜುನ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

