ಮಕರ ಸಂಕ್ರಾಂತಿ ಹಿನ್ನೆಲೆ ಇಂದು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಮಕರ ಸಂಕ್ರಮಣ ಪೂಜೆ ಜರುಗಲಿದೆ. ಈ ಬಳಿಕ ಮಹಾಮಂಗಳಾರತಿ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯುವಂತ ಮಹಾಮಂಗಳಾರತಿ ಬಳಿಕ, ಭಕ್ತರಿಗೆ ಶಬರಿಮಲೆಯಲ್ಲಿನ ಮಕರ ಜ್ಯೋತಿ ದರ್ಶನವಾಗಲಿದೆ. ಶಬರಿಮಲೆಗೆ ವಿರುದ್ಧ ದಿಕ್ಕಿನಲ್ಲಿರುವಂತ ಪೊನ್ನಂಬಲಮೇಡು ಗಿರಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ,
ಭಕ್ತರಿಗೆ ಮಕರ ಸಂಕ್ರಾಂತಿಯ ದಿನವಾದ ಇಂದು, ಮಕರ ಜ್ಯೋತಿಯ ದರ್ಶನವಾಗಲಿದೆ ಎಂಬುದಾಗಿ ಶಬರಿಮಲೆ ಆಡಳಿತ ಮಂಡಳಿ ಈಗಾಗಲೇ ತಿಳಿಸಿತ್ತು. ಇದರಂತೆಯೇ ಜನವರಿ 14ರ ಇಂದು ಸಂಜೆ ಅಯ್ಯಪ್ಪ ಸ್ವಾಮಿಗೆ 7 ಗಂಟೆಗೆ ನಡೆಯುವಂತ ಮಹಾಮಂಗ ಳಾರತಿ ಬಳಿಕ, ಮಕರ ಜ್ಯೋತಿಯು ಶಬರಿಮಲೆಗೆ ವಿರುದ್ಧ ದಿಕ್ಕಿನಲ್ಲಿರುವಂತ ಪೊನ್ನಂಬಲಮೇಡು ಗಿರಿಯಲ್ಲಿ ಮೂರು ಬಾರಿ ದೇದೀ ಪ್ಯಮಾನವಾಗಿ ಮಿಣುಕಿ, ಗೋಚರಿಸಿ, ಅದೃಶ್ಯವಾಗಲಿದೆ.
