ಹುಬ್ಬಳ್ಳಿ: ರಾಜ್ಯದಲ್ಲಿ ಕರೋನಾ ಓಮಿಕ್ರಾನ್ ರಣ ಕೇಕೆ ಹಾಕುತ್ತಿದ್ದು. ಇದೀಗ ಕರೋನಾ ಹುಬ್ಬಳ್ಳಿಯನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯ ವಿದ್ಯಾನಗರದ ಸೇಂಟ್ ಅಂಥೋನಿ ಶಾಲೆಯಲ್ಲಿ ಇಬ್ಬರು ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಡ ಪಟ್ಟಿದೆ.
ಹೀಗಾಗಿ ಶಾಲೆಯಲ್ಲಿ ಮನ್ನೆಚ್ಚರಿಕೆಯಾಗಿ 80% ವಿದ್ಯಾರ್ಥಿಗಳ ಕೋವಿಡ್ ಟೆಸ್ಟ್ ಕೂಡ ಮಾಡಲಾಗಿದ್ದು, ಶಾಲೆಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಶಾಲೆ ಕಾಲೇಜುಗಳು ಬಂದ ಮಾಡಲಾಗಿದೆ. ಅಲ್ಲದೇ ಜಿಲ್ಲಾಡಳಿತ ಮುಂದಿನ ಆದೇಶದವರೆಗೂ ವಿದ್ಯಾನಗರದ ಸೇಂಟ್ ಅಂಥೋನಿ ಶಾಲೆಯನ್ನು ಬಂದ್ ಮಾಡಿಸಿದೆ.
