ಬೆಂಗಳೂರು: ಲಂಚ ಪಡೆದ ಆರೋಪದಡಿ ಮಡಿವಾಳ ಇನ್ಸ್ಪೆಕ್ಟರ್ ಓರ್ವರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ. ಮಡಿವಾಳ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ನಾಯಕ್ ಅಮಾನತು ಆಗಿರುವ ಅಧಿಕಾರಿ ಎಂದು ಹೇಳಲಾಗಿದೆ. ವರದಕ್ಷಿಣೆ ಕಿರುಕುಳ ಸಂಬಂಧ ಅಜಯ್ ಎಂಬ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೋರ್ಟ್ ಗೆ ಹಾಜರಾಗದೇ ಇದುದ್ದರಿಂದ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಲಾಗಿದ್ದು,
ಹೀಗಾಗಿ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಲಂಚ ಪಡೆದು ಅಜಯ್ & ಆತನ ಪೋಷಕರನ್ನು ಬಿಟ್ಟು ಕಳುಹಿಸಿದ್ದರು. ಇದರ ವಿಡಿಯೋ ಮಾಡಿದ ಆರೋಪಿ ಕಮಿಷನರ್ ಕಮಲ್ ಪಂಥ್ ಗೆ ನೀಡಿದ್ದ. ಈ ವಿಡಿಯೋ ಆಧರಿಸಿ ಡಿಸಿಪಿ ಶ್ರೀನಾಥ್ ಜೋಶಿಗೆ ವರದಿ ಸಲ್ಲಿಸುವಂತೆ ಕಮಲ್ ಪಂಥ್ ಕೇಳಿದ್ದರು. ನಂತರ ಡಿಸಿಪಿ ವರದಿ ಆಧರಿಸಿ ಮಡಿವಾಳ ಇನ್ಸ್ಪೆಕ್ಟರ್ ಸುನಿಲ್ ನಾಯಕ್ ನನ್ನು ಸಸ್ಪೆಂಡ್ ಮಾಡಿ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.
