ಬೆಂಗಳೂರು: ಬಹುಕೋಟಿ ರೂಪಾಯಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ನೆಚ್ಚಿನ ಐಷಾರಾಮಿ ಕಾರುಗಳನ್ನು ಹರಾಜಿಗೆ ಇಟ್ಟಿದ್ದಾರೆ ಐಟಿ ಅಧಿಕಾರಿಗಳು. ನೂರಾರು ಕೋಟಿ ರೂಪಾಯಿ ವಂಚನೆ ಕೇಸಲ್ಲಿ ಬಂಧನ ಆಗಿರೋ ಸುಕೇಶ್ ಚಂದ್ರಶೇಖರ್, ಸದ್ಯ ದೆಹಲಿ ಕಾರಾಗೃಹದಲ್ಲಿದ್ದಾರೆ. ಹಲವು ಸಂಸ್ಥೆಗಳಿಗೆ ತೆರಿಗೆ ಬಾಕಿ ಉಳಿಸಿಕೊಂಡಿರೋ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಲವು ಸ್ವತ್ತುಗಳನ್ನು ವಶಪಡಿಸಿಕೊಂಡಿತ್ತು.
ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ 12 ಐಷಾರಾಮಿ ಕಾರುಗಳನ್ನೂ ಜಪ್ತಿ ಮಾಡಿದ್ದ ಐಟಿ ಅಧಿಕಾರಿಗಳು BMW, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಇದೀಗ ಹರಾಜಿಗೆ (Auction) ಇಟ್ಟಿದ್ದಾರೆ. ನ.28 ರಂದು ಹರಾಜು ಹಾಕಲು ಮುಂದಾಗಿದ್ದು, ಸುಮಾರು 308 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರ ಪರಿಣಾಮ ಇದಾಗಿದೆ.
ಈಗ ಕಾರು ಹರಾಜಿನ ಕಾರಣದಿಂದಾಗಿ ಸುದ್ದಿ ಆಗಿರುವ ಸುಕೇಶ್, ಈ ಹಿಂದೆ ಜೈಲಿನಲ್ಲಿದ್ದುಕೊಂಡೇ (Jail) ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪ್ರೇಮ ಪತ್ರ (Love Letter) ಬರೆಯುವ ಮೂಲಕ ಸುದ್ದಿಯಾಗಿದ್ದ. ನಿನಗಾಗಿ ನಾನು ಎಂತಹ ರಿಸ್ಕ್ ತಗೆದುಕೊಳ್ಳಲೂ ರೆಡಿ ಇರುವುದಾಗಿ ತಿಳಿಸಿದ್ದ. ಈ ಪತ್ರವನ್ನು ಜಾಕ್ವೆಲಿನ್ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಆದರೆ, ಪತ್ರವನ್ನಂತೂ ಬರೆದು, ಜಾಕ್ವೆಲಿನ್ ಗೆ ಪೋಸ್ಟ್ ಮಾಡಿದ್ದ.