ಕೊಪ್ಪಳ: ಬಿಜೆಪಿಯ ಮತ್ತೊಬ್ಬ ಶಾಸಕರ ಆಡಿಯೋ ಲೀಕ್ ಆಗಿದ್ದು, ಫೋನ್ ಸಂಭಾಷಣೆಯ ಆಡಿಯೋ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ವೈರಲ್ ಆಗುತ್ತಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ MLA ಬಸವರಾಜ ದಡೇಸುಗೂರು, ಫೋನ್ ಸಂಭಾಷಣೆಯ ಆಡಿಯೋ ಫುಲ್ ವೈರಲ್ ಆಗಿದ್ದು, ನೀನ್ ನನಗೆ ಕೊಟ್ಟ ಮಾತಿಗೆ ತಪ್ಪಿದ್ದೀಯ. ನನ್ನ ಬಳಿ ಬರದಿದ್ರೆ ಕಚೇರಿ ಬಳಿ ಬರ್ತೀನಿ, ರಂಪಾಟ ಮಾಡ್ತೀನಿ ಎಂದು ಮಹಿಳಾ ಅಧಿಕಾರಿ ಆಡಿಯೋದಲ್ಲಿ ಮಾತನಾಡಿದ್ದು,
ದಮ್ಮಯ್ಯಾ ಅಲ್ಲಿಗೆ ಬರ್ಬೇಡಾ. ನಾನಿರೋ ಕಡೆ ಬಾ ಎಂದು MLA ಹೇಳಿದ್ದಾರೆ. ನಿನ್ನ ಮಾನ ಹರಾಜು ಹಾಕ್ತೀನಿ ಅಂತಾ ಮಹಿಳಾ ಅಧಿಕಾರಿ ಆಡಿಯೋದಲ್ಲಿ ವಾರ್ನಿಂಗ್ ಕೊಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಡಿಯೋ ಭಾರೀ ವೈರಲ್ ಆಗುತ್ತಿದೆ. ಡಿಸೆಂಬರ್ 13ರಂದೇ ಈ ಸಂಬಂಧ ಎಸ್ಪಿಗೆ ದೂರು ಹೋಗಿದೆ ಆದರೆ ಪ್ರಭಾವ ಬೀರಿ ಈ ದೂರಿನ ಸಂಬಂಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕಾಂಗ್ರೆಸ್ ಮಾಜಿ ಶಾಸಕ ಶಿವರಾಜ್ ತಂಗಡಗಿ ಗಂಭೀರ ಆರೋಪ ಮಾಡಿದ್ದಾರೆ.

