ಬೆಂಗಳೂರು: ಜನವರಿ 17 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಸಂಬಂಧ ಇಂದು ನಗರದಲ್ಲಿ ಲಾರಿ ಮಾಲೀಕರು ಸಭೆ ನಡೆದಿದ್ದು ಕೇಂದ್ರ ಸರ್ಕಾರ ಕಾಯ್ದೆ ವಿರೋಧಿಸಿ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ ದಕ್ಷಿಣ ಭಾರತ ಲಾರಿ ಮಾಲೀಕರು/_ಚಾಲಕರು ಕೇರಳ,ತಮಿಳುನಾಡು,ಮುಂಬಯಿ ,ಮಹಾರಾಷ್ಟ್ರ
ಹೈದರಾಬಾದ್ ಚೆನ್ನೈ ಸೇರಿ ಇತರೆ ರಾಜ್ಯದ ಲಾರಿ ಮಾಲೀಕರು ಭಾಗಿಯಾಗಿದ್ದಾರೆ.
ಲಾರಿ ಮಾಲೀಕರ ಬೇಡಿಕೆಗಳು ಏನು?: ಕೇಂದ್ರ ಸರ್ಕಾರದ ಮುಂದಿರುವ ಬೇಡಿಕೆ
– ಕೇಂದ್ರ ಸರ್ಕಾರದ ಭಾರತೀಯ ನ್ಯಾಯ ಸಂಹಿತೆ ಕಲಂ 106ರ ಉಪವಿಧಿ 1ಮತ್ತು 2 ಅನ್ನು ಕೈ ಬಿಡಬೇಕು
ಕರ್ನಾಟಕ ಸರ್ಕಾರದ ಮುಂದಿರುವ ಬೇಡಿಕೆಗಳು:-
– ರಾಜ್ಯದ ಗಡಿ ಭಾಗಗಳಲ್ಲಿರುವ ಎಲ್ಲಾ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದುಹಾಕುವುದು
– EXCESS PROJECTION ವಿಧಿಸುತ್ತಿರುವ 20 ಸಾವಿರ ದಂಡವನ್ನು ಕಡಿಮೆಗೊಳಿಸಬೇಕು
– ಕಪ್ಪು ಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ FC ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ನಿರಾಕರಿಸುವುದನ್ನು ನಿಲ್ಲಿಸಬೇಕು
– DSA ಕೇಸುಗಳು ಎಲ್ಲೇ ಇದ್ದರು ಸಹ ಅದನ್ನು ವಾಹನ ಮಾಲೀಕರು ತಮ್ಮ ಮೂಲ ಕಚೇರಿಯಲ್ಲಿ ಮುಗಿಸಿಕೊಳ್ಳುವ ಅವಕಾಶ ನೀಡಬೇಕು
ಪೋಲೀಸ್ ಇಲಾಖೆಯಲ್ಲಿರುವ ಬೇಡಿಕೆಗಳು:-
– ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳ ನಗರ ಪ್ರವೇಶಕ್ಕೆ ದಿನದ ಕೆಲವು ಸಮಯದಲ್ಲಿ ಮಾಡಿರುವ ನಿರ್ಭoಧ ವನ್ನು ಕೈಬಿಡಬೇಕು
– ಅಪಘಾತ ನಡೆದಾಗ ವಾಹನ ಚಾಲಕನ ಚಾಲನಾ ಪತ್ರವನ್ನು ವಶಪಡಿಸಿ ಕೊಳ್ಳುವುದನ್ನು ಬಿಡಬೇಕು
– ಅಪಘಾತ ನಡೆದ ನಂತರ ವಶಪಡಿಸಿಕೊಂಡ ವಾಹನ ಮತ್ತು ಚಾಲಕನನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು
– ಚಾಲಕನ ಚಾಲನಾ ಪರವಾನಿಗೆಯನ್ನು ಅಮಾನತ್ತಿನಲ್ಲಿಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯುವುದನ್ನು ನಿಲ್ಲಿಸಬೇಕು
– ಹೊರ ರಾಜ್ಯಗಳ ವಾಹನಗಳು ನಮ್ಮ ರಾಜ್ಯಾದಲ್ಲಿ ಅಪಘಾತಕ್ಕೆ ಈಡಾದಾಗ, ವಾಹನ ಮತ್ತು ಚಾಲಕನ ಬಿಡುಗಡೆಗೆ ಸ್ಥಳೀಯ ಭದ್ರತೆ ಮತ್ತು ಜಾಮೀನು ಕೇಳುವುದನ್ನು ನಿಲ್ಲಿಸಬೇಕು
– ಬ್ರೇಕ್ ಡೌನ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ಬದಿಯಲ್ಲಿ ನಿಂತಿದ್ದರು ವಾಹನಗಳನ್ನು ವಶಪಡಿಸಿಕೊಂಡು ಕಲಂ 283 ರಡಿಯಲ್ಲಿ ಕೇಸು ದಾಖಲಿಸುವುದನ್ನು ನಿಲ್ಲಿಸಬೇಕು
– ವಾಹನದ ಡೀಸೆಲ್ ಮತ್ತು ಬಿಡಿ ಭಾಗಗಳು ಕಳ್ಳತನವಾದಾಗ ಮಾಲೀಕರು ಠಾಣೆಗೆ ದೂರು ನೀಡಿದಾಗ FIR ದಾಖಲಿಸಬೇಕು