ವಾಷಿಂಗ್ಟನ್ ಡಿ.ಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಮೋದಿಯನ್ನು ಟ್ರಂಪ್ ಭೇಟಿ ಮಾಡಲಿದ್ದು, ಭೇಟಿಗೂ ಮುನ್ನ ನನ್ನ ಆತ್ಮೀಯ ಸ್ನೇಹಿತ ಎಂದು ಮೋದಿಯನ್ನು ಕರೆದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂತ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನನ್ನ ಎರಡನೇ ಅವಧಿಯ ಮೂರು ಶ್ರೇಷ್ಠ ವಾರಗಳ ಸಂದರ್ಭದಲ್ಲಿ ನನ್ನ ಅತ್ಯುತ್ತಮ ವಾರವನನ್ನು ನೋಡುತ್ತಿದ್ದೇನೆ. ಆದರಂತೆ ನನ್ನ ಆತ್ಮೀಯ ಸ್ನೇಹಿತನ್ನು ಭೇಟಿಯಾಗುತ್ತಿದ್ದೇನೆ ಎಂದಿದ್ದಾರೆ.
ಎರಡು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ಇಂದು, ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾದ ತುಳಸಿ ಗಬ್ಬಾರ್ಡ್ ಅವರನ್ನು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾದರು. ಇದೇ ವೇಳೆ ಭಾರತ-ಯುಎಸ್ಎ ಸ್ನೇಹದ ವಿವಿಧ ಅಂಶಗಳನ್ನು ಚರ್ಚಿಸಿದರು ಎನ್ನಲಾಗಿದೆ. ಇದರೊಂದಿಗೆ ನಾಳೆ ಮುಂಜಾನೆ 2.35 ಕ್ಕೆ ಇಬ್ಬರು ನಾಯಕರು ಭೇಟಿಯಾಗಲಿದ್ದಾರೆ. ನಂತರ ಬೆ. 3.40 ಕ್ಕೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.