ತುಮಕೂರು: ಹೆರಿಗೆ ಮಾಡಿಸಲು 3 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸರ್ಕಾರಿ ವೈದ್ಯನೊಬ್ಬ ಲೋಕಾಯುಕ್ತಬಲೆಗೆ ಬಿದ್ದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಡಾ.ಹರಿಪ್ರಸಾದ್ ಸಿಕ್ಕಿಬಿದ್ದ ವೈದ್ಯ. ಹನುಮಂತಪ್ಪ ಎಂಬುವರ ಬಳಿ ಹೆರಿಗೆ ಮಾಡಿಸಲು ಹಣಕ್ಕೆ ಬೇಡಿಕೆಯಿಟ್ಟಿದ್ದನಂತೆ.
ರಾಜ್ಯದಲ್ಲಿ ರೂಪಾಂತರಿ ಕರೋನಾ ಆತಂಕ -ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲ ಕೇಸ್ ಪತ್ತೆ!
ಹೀಗಾಗಿ ಆತ ಲೋಕಾಯುಕ್ತ ಅಧಿಕಾರಿಗಳ ಮೊರೆ ಹೋಗಿದ್ದ. ಹೆರಿಗೆಗೂ ಮುನ್ನ ಹಣ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಕುರಿತು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.