ಆನೇಕಲ್:- 2024 ರ ಲೋಕಾ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಜ್ಜು ಮಾಡಲಾಗಿದೆ.
381 ಪೋಲಿಂಗ್ ಬೂತ್ ಗಳಲ್ಲಿ ಮತದಾನಕ್ಕೆ ಸಜ್ಜು ಮಾಡಲಾಗಿದ್ದು, ಪ್ರತಿಯೊಂದು ಪೊಲಿಂಗ್ ಬೂತ್ ಗಳಲ್ಲಿ ಐವರು ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಪೊಲೀಸರ ನಿಯೋಜನೆ ಮಾಡಿ ಭದ್ರತೆ ಒದಗಿಸಲಾಗಿದೆ. ಒಟ್ಟು ಮತದಾರರ ಸಂಖ್ಯೆ 423844, ಪುರುಷ ಮತದಾರರ ಸಂಖ್ಯೆ
220871, ಮಹಿಳಾ ಮತದಾರರ ಸಂಖ್ಯೆ 202886 ಇತರೆ ಇತರೆ ಮತದಾರರ ಸಂಖ್ಯೆ87 ಇದ್ದು, ಆನೇಕಲ್ ಕ್ಷೇತ್ರ ವ್ಯಾಪ್ತಿಯಲ್ಲಿ 381 ಬೂತ್ಗಳಲ್ಲಿ ಪೈಕಿ ಎಂಟು ಮಾದರಿ ಮತಗಟ್ಟೆಗಳು ಇವೆ.
ಐದು ಮತಗಟ್ಟೆಗಳನ್ನ ಸಖಿ ಮತಗಟ್ಟೆಗಳನ್ನಾಗಿ ಮಾಡಲಾಗಿದ. ಸರ್ಜಾಪುರ, ಹೆಬ್ಬಗೋಡಿ, ಚಂದಾಪುರ, ಬೊಮ್ಮಸಂದ್ರ, ಅತ್ತಿಬೆಲೆಯಲ್ಲಿ ಪಿಂಕ್ ಸಖಿ ಮತಗಟ್ಟೆ ನಿರ್ಮಿಸಲಾಗಿದೆ. ನೆರಳೂರಿನಲ್ಲಿ ವಿಶೇಷ ಚೇತನರಿಗಾಗಿ ಒಂದು ಮತಗಟ್ಟೆಯನ್ನ ತೆರೆಯಲಾಗಿದೆ ಮರಸೂರಿನಲ್ಲಿ ಯೂತ್ ಮ್ಯಾನೇಜ್ ಮತಗಟ್ಟೆ ಮಾಡಲಾಗಿದೆ. ಗೆರಟಿಗನಬೆಲೆಯಲ್ಲಿ ಥೀಮ್ ಬೇಸ್ ಮಾದರಿಯ ಮತಗಟ್ಟೆ ಮಾಡಲಾಗಿದ್ದು, ಮತದಾರರನ್ನ ಮತಗಟ್ಟೆಗಳತ್ತ ಸೆಳೆಯಲು ಮಾದರಿ ಬೂತ್ ಗಳ ಸ್ಥಾಪನೆ ಮಾಡಲಾಗಿದೆ.
ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಯ ಮತಹಬ್ಬಕ್ಕೆ ಸಕಲ ಸಿದ್ದತೆ ಮಾಡಲಾಗಿದ್ದು, ಇವಿಎಂ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ನೊಂದಿಗೆ ಸಿಬ್ಬಂದಿ ಸಜ್ಜಾಗಿದ್ದಾರೆ. ಅಣುಕು ಮತದಾನದ ಮೂಲಕ ವೋಟಿಂಗ್ ಶುರುವಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲವಾಗದಂತೆ ಮೊದಲಿಗೆ ಅಣಕು ಮತದಾನ ನಡೆಯಲಿದೆ. ಇನ್ನೂ ಮತಗಟ್ಟೆಯಿಂದ ನೂರು ಮೀಟರ್ ಅಂತರದಲ್ಲಿ ಪಕ್ಷದ ಕಾರ್ಯಕರ್ತರಿಗೆ ನಿರ್ಬಂಧ ವಿಧಿಸಲಾಯಿತು. ಯಾವುದೇ ಗೊಂದಲಗಳಿಲ್ಲದೆ ಸೂಸುತ್ರವಾಗಿ ಮತದಾನ ನಡೆಯಲು ಸಿದ್ದತೆ ಮಾಡಲಾಗಿದೆ.