ತುಮಕೂರು: SC, ST ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಲೋಕಸಭೆ ಅನುಮೋದಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ (Satish Jarakiholi)ಹೇಳಿದ್ದಾರೆ. ಮೀಸಲಾತಿ ಹೋರಾಟದಲ್ಲಿ ಸ್ವಾಮೀಜಿಗೆ ನಾವೆಲ್ಲರೂ ಬೆಂಬಲ ನೀಡಿದ್ದೆವು. ನಮಗೆ ಪ್ರತ್ಯೇಕ ಸಚಿವಾಲಯ ಆಗಬೇಕೆನ್ನುವುದು ಬಹುದಿನದ ಬೇಡಿಕೆಯಾಗಿದೆ.
Tech Tips: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸ್ಟೋರೆಜ್ ಸಮಸ್ಯೆಯಾಗುತ್ತಿದೆಯಾ: ಇಲ್ಲಿದೆ ಟಿಪ್ಸ್!
ಅಧಿವೇಶನ ಸಂದರ್ಭದಲ್ಲಿ ಸಮುದಾಯದವರು ಸಭೆ ಸೇರಿ ಚರ್ಚಿಸೋಣ. ನಮ್ಮ ಸಮುದಾಯದ ಸಮಸ್ಯೆಗಳ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಡುವೆ. ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಮುದಾಯ ಮುಂದೆ ಬರಬೇಕು. ಡಾ.ಅಂಬೇಡ್ಕರ್ ಹೇಳಿದಂತೆ ನಮ್ಮ ಸಮುದಾಯ ಕೊಡುವ ಕೈ ಆಗಬೇಕು. ಈಗಾಗಲೇ ಮೂರ್ನಾಲ್ಕು ಕಡೆ ಮಠಗಳಿಗಾಗಿ ಜಮೀನು ಖರೀದಿಸಲಾಗಿದೆ ಎಂದರು.
