ಬೆಂಗಳೂರು:- ಕಲಾಪದಲ್ಲಿ ತುರುವೇಕರೆ ಶಾಸಕ ಎಂ.ಟಿ ಕೃಷ್ಣಪ್ಪ ಅವರು ಮದ್ಯದ ಬೆಲೆ ಏರಿಕೆ ಕುರಿತು ಪ್ರಸ್ತಾಪಿಸಿ, ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಲಿಕ್ಕರ್ ಬೆಲೆ ದುಬಾರಿ ಆಗಿದೆ.
50 ರೂ. ಇದ್ದಿದ್ದ ಓಟಿ ಬೆಲೆ ಈಗ 220 ರೂ.ಗೆ ಏರಿಕೆ ಆಗಿದೆ ಎಂದರು. ಇದಕ್ಕೆ ಕಾಂಗ್ರೆಸ್ ಶಾಸಕರೊಬ್ಬರು, ಇದರಿಂದ ನಿಮಗೇನಾದರೂ ತೊಂದರೆ ಆಗಿದಿಯಾ ಎಂದು ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕೃಷ್ಣಪ್ಪ, ನಮಗೇನು ತೊಂದರೆ ಆಗಿಲ್ಲ ರೀ, ನಾವೇನು ಸ್ಕಾಚ್ ಕುಡಿತಿವಿ. ಪಾಪ ಅವರ ಗತಿ ಏನು ರೀ ಎಂದರು.
ನಮಗೆ ಅವರೂ (ಮದ್ಯ ಪ್ರಿಯರು) ಸೇರಿದಂತೆ ಎಲ್ಲ ವರ್ಗದವರೂ ಮತ ಹಾಕಿದ್ದಾರೆ. ಅವರ ಬಗ್ಗೆಯೂ ನಾವು ಯೋಚಿಸಬೇಕು. ಅವರ (ಮದ್ಯಪ್ರಿಯರ) ತಲೆ ಒಡೆದು ಹಣ ಪಡೆಯುವುದು ಸರಿಯಲ್ಲ ಎಂದು ಹೇಳುವ ಮೂಲಕ ಮದ್ಯಪ್ರಿಯರ ಪರ ಬ್ಯಾಟ್ ಬೀಸಿದರು.