ಗದಗ:- ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
Siddaramaiah: ಕಾಂಗ್ರೆಸ್ ಸರ್ಕಾರ ಪತನ ಎಂಬುದು ಬಿಜೆಪಿಯ ಭ್ರಮೆ – ಸಿದ್ದರಾಮಯ್ಯ
ಈ ಸಂಬಂಧ ಗದಗದಲ್ಲಿ ಮಾತನಾಡಿದ ಅವರು, ನಾವು ಬೆಂಗಳೂರಿಗೆ ಕರೆಸಿ ಬಹಳ ಪ್ರಯತ್ನ ಮಾಡಿದ್ವಿ, ಮಾತಾಡಿದ್ವಿ. ಕಾಂಗ್ರೆಸ್ ಸೇರಲ್ಲ ಅಂದಿದ್ರು. ಅವರೊಬ್ಬ ಒಳ್ಳೆ ನಾಯಕರು, ನಿಜವಾಗಲು ದುರದೃಷ್ಟಕರ. ಅವರಿಗೆ ಟಿಕೇಟ್ ಕೊಡದೇ ಇರೋದಕ್ಕೆ ಬೇಜಾರಾಗಿದೆ, ನಾವು ಸಮಾಧಾನ ಮಾಡಿದ್ವಿ. ಕಾಂಗ್ರೆಸ್ ನವರು ಪ್ರಚೋದನೆ ಮಾಡಿರಬಹುದು. ಸೇರ್ತಾ ಇದ್ದಾರೆ, ಏನೇ ಆಗಲಿ ನಮ್ಮ ಫೈಟ್ ಮುಂದುವರೆಯುತ್ತದೆ ಎಂದರು.
ಇನ್ನೂ ಲಿಂಗಾಯತ ನಾಯಕರು ಪಕ್ಷ ಬಿಡ್ತಿರೋ ವಿಚಾರವಾಗಿ ಮಾತನಾಡಿ, ಆ ತರ ಇರೋದಿಲ್ಲ ರೀ. ಯಾರೋ ಒಬ್ಬರು ಹೋದ ತಕ್ಷಣ ಹಾಗೆ ಆಗಲ್ಲ. ಇದು ರಾಷ್ಟ್ರೀಯ ಚುನಾವಣೆ, ರಾಷ್ಟ್ರೀಯ ವಿಚಾರಗಳ ಮೇಲೆ ಇರತ್ತೆ. ಸಣ್ಣ ಪುಟ್ಟ ಹೋದ್ರೂ ಕೂಡಾ ದೊಡ್ಡ ಎಫೆಕ್ಟ್ ಆಗೋದಿಲ್ಲ. ಓವರಾಲ್ ಕೊಪ್ಪಳದಲ್ಲಿ ಗೆಲ್ತೇವೆ ಎಂದು ಹೇಳಿದ್ದಾರೆ.