ಕನ್ನಡ ಹಿರಿಯ ನಟಿ ಲೀಲಾವತಿಯವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರ ಅಂತ್ಯಕಗ್ರಿಯೆ ಇಂದು, ಡಿಸೆಂಬರ್-9 ರಂದು ಸೋಲದೇವನಹಳ್ಳಿ ತೋಟದ ಮನೆಯಲ್ಲಿಯೇ ನಡೆಯಲಿದೆ.
ಇನ್ನೂ ಲೀಲಾವತಿ ನಿಧನ ಹಿನ್ನೆಲೆ, ಲೀಲಾವತಿ ನೆನೆದು ಶ್ವಾನ ಕಣ್ಣೀರು ಹಾಕಿದೆ. ಬ್ಲಾಕಿ ಹೆಸರಿನ ನಾಯಿ ಲೀಲಾವತಿ ಫೋಟೋ ಮುಂದೆ ಕಣೀರು ಹಾಕಿರುವುದು ಮನಕಲುಕುವಂತಿದೆ.
ಇನ್ನು ನಟಿ ಲೀಲಾವತಿಯ ಅಂತ್ಯಕ್ರಿಯೆ ಬಗ್ಗೆ ಮಗ ವಿನೋದ್ ರಾಜ್ ಮಾಹಿತಿ ನೀಡಿದ್ದು, ಈ ವೇಳೆ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿನೋದ್ ರಾಜ್ ಅಂಬೇಡ್ಕರ್ ಮೈದಾನದಕ್ಕೆ ಪಾರ್ಥೀವ ಶರೀರ ಕೊಂಡೊಯ್ಯಲಾಗುತ್ತದೆ. ನಂತ್ರ ಅಲ್ಲಿಂದ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗುತ್ತೆ. ತೋಟದ ಮನೆಯಲ್ಲಿ ಕಾರ್ಯ ನಡೆಸಲಾಗುತ್ತೆ ಎಂದಿದ್ದಾರೆ.