ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಲೀಲಾವತಿ ನಿನ್ನೆ ಸಂಜೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಂತಿಮ ದರ್ಶನಕ್ಕೆ ಇಲ್ಲೇ ಅವಕಾಶ ಮಾಡಿರುವ ಹಿನ್ನಲೆ ಸಾಕಷ್ಟು ಗಣ್ಯರು, ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಕಲಾಕ್ಷೇತ್ರ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಿರುವ ಪೊಲೀಸ್ ಸಿಬ್ಬಂದಿ. ಗಣ್ಯರಿಗಾಗಿ ಪ್ರತ್ಯೇಕ ವಿಐಪಿ ಗೇಟ್ ವ್ಯವಸ್ಥೆ ಮಾಡಲಾಗಿದೆ ಎಂಟ್ರಿ & ಎಕ್ಸಿಟ್ ಗೇಟ್ ಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ.
ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರ ಆವರಣಕ್ಕೆ ಬರಲಿರುವ ಲೀಲಾವತಿ ಪಾರ್ಥಿವ ಶರೀರ. ಮಧ್ಯಾಹ್ನ 2:30 ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ. 2:30 ರ ಬಳಿಕ ಸೋಲದೇವನಹಳ್ಳಿಗೆ ತೆರಳಲಿರುವ ಪಾರ್ಥಿವ, ಹಿಂದು ಸಂಪ್ರಾದಯದಂತೆ ಅಂತ್ಯಕ್ರಿಯೆ ನೆರವೇರಿಸಲಿರುವ ಕುಟುಂಬಸ್ಥರು.
ಹಿರಿಯ ನಟಿ ಲೀಲಾವತಿ ನಿಧನರಾಗಿರುವ ಹಿನ್ನೆಲೆ ಇಂದು ನಡೆಯಬೇಕಿದ್ದ ಅನ್ ಬಾಕ್ಸಿಂಗ್ ಬಿಎಲ್ ಆರ್ ಹಬ್ಬ ನಾಳೆಗೆ ಮುಂದೂಡಲಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಬೇಕಿದ್ದ ‘ನಮ್ಮ ಜಾತ್ರೆ’ ಕಾರ್ಯಕ್ರಮ. ಹಿರಿಯ ನಟಿ ಲೀಲಾವತಿ ಅವರ ಗೌರವಾರ್ಥವಾಗಿ ಸಂಘಟಕರು ಕಾರ್ಯಕ್ರಮ ಮುಂದೂಡಿದ್ದಾರೆ.