ರಾಮನಗರ: HD ಕುಮಾರಸ್ವಾಮಿಯಂತೆ ನನಗೂ ಏಕವಚನದಲ್ಲಿ ಮಾತಾಡಲು ಬರುತ್ತದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ (ಮತ್ತು ಡಿಕೆ ಸಹೋದರರ ನಡುವಿನ ವೈಷಮ್ಯ ದಿನಗಳೆದಂತೆ ಉಲ್ಬಣಿಸುತ್ತಿದೆ. ರಾಮನಗರದಲ್ಲಿ ವಕೀಲರು ಮಾಡುತ್ತಿದ್ದ ಪ್ರತಿಭಟನೆ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಸಮಯ ಹೋಗಿ ಬೆಂಬಲ ಸೂಚಿಸಿದ್ದು,
ಧರಣಿಯಲ್ಲಿ ಕೂತಿದ್ದು ರಾಜಕೀಯವಲ್ಲದೆ ಮತ್ತೇನೂ ಅಲ್ಲ. ಗೃಹ ಸಚಿವ ಜಿ ಪರಮೇಶ್ವರ್ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದರೂ ಅಶೋಕ ಹಾಗೂ ಕುಮಾರಸ್ವಾಮಿ ರಾಮನಗರಕ್ಕೆ ಬಂದಿದ್ದರು. ಮಾಧ್ಯಮಗಳಿಗೆ ಹೇಳಿಕ ನೀಡುವಾಗ ಕುಮಾರಸ್ವಾಮಿ, ಡಿಕೆ ಸುರೇಶ್ ಬಗ್ಗೆ ಮಾತಾಡುತ್ತಾ ‘ಅವನ್ಯಾವ್ನೋ ಎಂಪಿ ಎಲ್ಲೊಂದ್ಲೋ ಫೋನ್ ಮಾಡ್ತಾನೆ’ ಅಂತ ಏಕವಚನದಲ್ಲಿ ಜರಿದಿದ್ದರು.
Heat Rashes Problem: ಬೇಸಿಗೆಯಲ್ಲಿ ಕಾಡುವ ಗುಳ್ಳೆ, ದದ್ದು, ತುರಿಕೆ ಸಮಸ್ಯೆಗೆ ಇಲ್ಲಿದೆ ಪರಿಹಾರ..!
. ಅದನ್ನು ಸುರೇಶ್ ಗಮನಕ್ಕೆ ತಂದಾಗ, ವಕೀಲರ ಪ್ರತಿಭಟನೆ ರಾಜಕೀಯಕ್ಕೆ ಬಳಸಿಕೊಳ್ಳುವ ಕುತಂತ್ರ ಕುಮಾರಸ್ವಾಮಿ ಮತ್ತು ಅಶೋಕ ಮಾಡಿದ್ದಾರೆ, ಕುಮಾರಸ್ವಾಮಿಯಂತೆ ತನಗೂ ಏಕವಚನದಲ್ಲಿ ಮಾತಾಡಲು ಬರುತ್ತದೆ, ಸಮಯ ಬಂದಾಗ ಹಾಗೆ ಮಾತಾಡ್ತೀನಿ ಹೋಗಿ ‘ಅವನಿಗೆ’ ಹೇಳಿ ಅಂತ ಮಾಧ್ಯಮದವರಿಗೆ ಹೇಳಿದ್ದಾರೆ.