ದುಬೈ:- ಯುಎಇ ವಿಮಾನ ಅಪಘಾತದಲ್ಲಿ ಪೈಲಟ್ ಜೊತೆ ಭಾರತೀಯ ಮೂಲದ ವೈದ್ಯ ಸಾವನ್ನಪ್ಪಿರುವ ಘಟನೆ ರಾಸ್ ಅಲ್ ಖೈಮಾ ಕರಾವಳಿಯಲ್ಲಿ ಜರುಗಿದೆ.
ಹೊಸ ವರ್ಷದ ಸಂಭ್ರಮದಲ್ಲಿರುವ ಜನತೆಗೆ ಬಿಗ್ ಶಾಕ್: ತಿಂಗಳಲ್ಲೇ ಬಸ್ ಟಿಕೆಟ್ ದರ ಏರಿಕೆಯಾಗುತ್ತಾ?
ಮೃತ ವ್ಯಕ್ತಿಯನ್ನು ಸುಲೈಮಾನ್ ಅಲ್ ಮಜೀದ್ ಎಂದು ಗುರುತಿಸಲಾಗಿದೆ. ಡಿ. 26 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೋವ್ ರೊಟಾನಾ ಹೋಟೆಲ್ ಬಳಿ ಟೇಕಾಫ್ ಆದ ಕೆಲವೇ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರ ತಂದೆ ಮಜಿದ್ ಮುಕರ್ರಂ ತಿಳಿಸಿದ್ದಾರೆ.
ಅಪಘಾತದಲ್ಲಿ 26 ವರ್ಷದ ಪಾಕಿಸ್ತಾನಿ ಮಹಿಳೆ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಜನರಲ್ ಸಿವಿಲ್ ಏವಿಯೇಷನ್ ಅಥಾರಿಟಿ ಘಟನೆಯನ್ನು ದೃಢಪಡಿಸಿದೆ. ಈ ವಿಮಾನವು ಜಜಿರಾ ಏವಿಯೇಷನ್ ಕ್ಲಬ್ಗೆ ಸೇರಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.