ಬೆಂಗಳೂರು: ಬಡವರ ಮಕ್ಕಳನ್ನು ಬೆಳೆಯಲು ಬಿಜೆಪಿ ಬಿಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪರಿಶಿಷ್ಟ, ಒಬಿಸಿ, ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿ ವೇತನದ ಅನುದಾನದ ಮೊತ್ತವನ್ನು ಕಡಿತಗೊಳಿಸುತ್ತಿದ್ದ ಬಿಜೆಪಿ ಸರ್ಕಾರ ಈಗ ಸಂಪೂರ್ಣ ಸ್ಥಗಿತಗೊಳಿಸಿದೆ. ದಲಿತ, ಹಿಂದುಳಿದ ವರ್ಗದವರನ್ನು ಶಿಕ್ಷಣದಿಂದ ದೂರ ಇಡುವ ಮನುವಾದಿ ಸಂಘಪರಿವಾರದ ಅಜೆಂಡಾವನ್ನು ಬಿಜೆಪಿ ಪಾಲಿಸುತ್ತಿದೆ.
ಬಡವರ ಮಕ್ಳನ್ನು ಬೆಳೆಯಲು ಬಿಡದಿರುವುದೇಕೆ ಬಿಜೆಪಿ? ಎಂದು ವಾಗ್ಧಾಳಿ ನಡೆಸಿದೆ. ಇನ್ನೂ ದಲಿತರ ಏಳಿಗೆಗಾಗಿ ನಮ್ಮ ಸರ್ಕಾರ SCSP/TSP ನಿಧಿ ಸ್ಥಾಪಿಸಿ ಐತಿಹಾಸಿಕ ನಿರ್ದಾರ ಕೈಗೊಂಡಿತ್ತು. ಈಗ ಬಿಜೆಪಿ ಆಡಳಿತದಲ್ಲಿ ಈ ಅನುದಾನವನ್ನು ಬೇರೆಡೆ ವರ್ಗಾಯಿಸಿತ್ತು , ಅನುದಾನ ಮೊತ್ತವನ್ನು ಕಡಿತಗೊಳಿಸಿತ್ತು , ಅಲ್ಪ ಅನುದಾನವನ್ನೂ ಬಳಕೆ ಮಾಡಲಿಲ್ಲ ಬಿಜೆಪಿಗೆ ದಲಿತರು ಏಳಿಗೆಯಾಗುವುದು ಸಹಿಸಲಾಗದ ವಿಷಯ ಎಂಬುದು ಸ್ಪಷ್ಟ ಎಂದು ಕಿಡಿಕಾರಿದೆ.

