ಹುಬ್ಬಳ್ಳಿ: ಇದು ಕಾಂಗ್ರೆಸ್ನ ಹುನ್ನಾರ. ಮತಾಂತರ ನಿಷೇಧ ಕಾಯಿದೆಯನ್ನು ಅಧಿಕಾರಕ್ಕೆ ಬಂದ್ರೆ ಕಿತ್ತು ಹಾಕ್ತಿವಿ ಎಂದು ಕೈ ಪಡೆಯವರು ಬೊಬ್ಬೆ ಹೊಡೆಯುತ್ತಿದ್ದಾರೆ. 2016ರಲ್ಲಿ ಸಿದ್ದರಾಮಯ್ಯ, ಟಿ.ಬಿ. ಜಯಚಂದ್ರ ಸಹಿ ಇರುವ ದಾಖಲೆ ಇತ್ತು ದ್ವಿಮುಖ ನೀತಿಯನ್ನ, ಬಂಡತನದ ನೀತಿಯನ್ನ ಕಾಂಗ್ರೆಸ್ ಅನುಸರಿಸಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗುಡುಗಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗೋಕೆ ಕಾಂಗ್ರೆಸ್ ಅವಕಾಶ ಮಾಡಿ ಕೊಟ್ಟಿಲ್ಲ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದವರು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗೋಕೆ ಬಿಟ್ಟಿಲ್ಲ.. ಸದನದ ಬಾವಿಗಿಳಿದು ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡಿದ್ರು ಸಾಧು ಸಂತರು, ಧಾರ್ಮಿಕ ಮುಖಂಡರು ನಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದರು ಹೀಗಾಗಿ ನಾವು ಅಧಿವೇಶನದಲ್ಲಿ ಈ ಬಿಲ್ನ್ನು ಪಾಸ್ ಮಾಡಿದ್ದೇವೆ.

ಆದ್ರೆ ಕಾಂಗ್ರೆಸ್ನವ್ರು ಇಟಲಿಯ ಸೋನಿಯಾ ಗಾಂಧಿ ಮಾತು ಕೇಳೋರು. ನಿಮಗೆ ತಾಕತ್ತಿದ್ದರೆ, ಒಂದೇ ಒಂದು ಸಾರಿ ಬಹಿರಂಗವಾಗಿ ನಾವು ಹಿಂದೂ ಎಂದು ಹೇಳಿಕೊಳ್ಳಿ ನೋಡೋಣ ಎಂದು ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಗರ್ಭಪಾತ ಆಗಿದೆ ಅದು ಹೆಣ್ಣೋ ಗಂಡೋ ಗೊತ್ತಿಲ್ಲ ನಿಮಗೆ ಹಿಂದುಗಳ ಮುಂಬರುವ ಚುನಾವಣೆ ತಕ್ಕ ಪಾಠ ಕಲಿಸುತ್ತಾರೆeಂದು ರೇಣುಕಾಚಾರ್ಯ ಗರಂ ಆಗಿದ್ದಾರೆ.