ಸಿಹಿ ಕುಂಬಳಕಾಯಿ ಸೇವನೆಯಿಂದ ಹಲವು ಲಾಭವಿದೆ. ಕುಂಬಳಕಾಯಿಯಲ್ಲಿರುವ ಪೌಷ್ಟಿಕ ಅಂಶ ಹೊಟ್ಟೆಗೆ ಸಂಬಂಧಿಸಿದ ರೋಗವನ್ನು ದೂರ ಮಾಡುವುದಲ್ಲದೇ ಹೃದಯ ಸಂಬಂಧಿತ ಕಾಯಿಲೆಯನ್ನೂ ದೂರ ಮಾಡುತ್ತದೆ. ಅದಲ್ಲದೆ ಪುರುಷರ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಸಿಗುತ್ತದೆ. ದೇಹಕ್ಕೆ ಪೌಷ್ಟಿಕಾಂಶದ ಜೊತೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು.
ಪುರುಷ ಫಲವತ್ತತೆ ಸುಧಾರಿಸುತ್ತದೆ
ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಕಂಡುಬರುವ ಸತುವಿನಿಂದ ಪುರುಷರು ಪ್ರಯೋಜನ ಪಡೆಯಬಹುದು. ಯಾಕೆಂದರೆ ಸತು ಮಟ್ಟ ಕಡಿಮೆಯಿದ್ದರೆ ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆ ಇರುತ್ತದೆ. ಈ ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಒಟ್ಟಾರೆ ವೀರ್ಯದ ಗುಣಮಟ್ಟ ಸುಧಾರಿಸಬಹುದು. ಡಿಕೆ ಪಬ್ಲಿಷಿಂಗ್ ಬರೆದ ‘ಹೀಲಿಂಗ್ ಫುಡ್ಸ್’ ಪುಸ್ತಕದ ಪ್ರಕಾರ ಸಿಹಿ ಕುಂಬಳಕಾಯಿ ಬೀಜಗಳು ಪುರುಷರ ಫಲವತ್ತತೆಯನ್ನು ಉತ್ತೇಜಿಸಲು ಮತ್ತು ಪ್ರಾಸ್ಟ್ರೇಟ್ ಸಮಸ್ಯೆಗಳನ್ನು ತಡೆಗಟ್ಟಲು ಉಪಯುಕ್ತವಾಗಿವೆ.
ಪ್ರೋಟೀನ್ ಸಮೃದ್ಧವಾಗಿದೆ
ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಸ್ನಾಯುಗಳನ್ನು ಬಲಪಡಿಸಲು ಅವಶ್ಯಕವಾಗಿದೆ. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (ಯುಎಸ್ಡಿಎ) ಪೌಷ್ಟಿಕಾಂಶ ಪಟ್ಟಿಯ ಪ್ರಕಾರ 100 ಗ್ರಾಂ ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಸುಮಾರು 23.33 ಗ್ರಾಂ ಪ್ರೋಟೀನ್ ಇದೆ. ಸುಲಭವಾಗಿ ಪ್ರೋಟೀನ್ ವರ್ಧಕ ಆಹಾರ ಬೇಕೆಂದರೆ ಯಾವುದೇ ಊಟಕ್ಕೆ ಅಥವಾ ತಿಂಡಿಗೆ ಸಿಹಿ ಕುಂಬಳಕಾಯಿ ಬೀಜಗಳನ್ನು ಸೇರಿಸಿ ಸೇವಿಸಿ.
ನೈಸರ್ಗಿಕ ಎಣ್ಣೆಯ ಅಂಶ ಹೆಚ್ಚಿದೆ
ಸಿಹಿ ಕುಂಬಳಕಾಯಿ ಬೀಜಗಳಲ್ಲಿ ನೈಸರ್ಗಿಕ ಎಣ್ಣೆ ಸಮೃದ್ಧವಾಗಿದೆ. ಅದರ ಹೆಚ್ಚು ಬೀಜಗಳನ್ನು ತಿನ್ನುವುದರಿಂದ ನೀವು ದಪ್ಪ ಆಗಬಹುದೇ? ಎಂದರೆ ಅದಕ್ಕೆ ಉತ್ತರವು ಇಲ್ಲ. ನಟ್ಸ್ ಮತ್ತು ಬೀಜಗಳಲ್ಲಿ ಹೆಚ್ಚು ಎಣ್ಣೆಯ ಅಂಶ ಇರುವುದರಿಂದ ಇವುಗಳನ್ನು ಆಗಾಗ್ಗೆ ಸೇವಿಸುವುದರಿಂದ ಬೊಜ್ಜು ಪ್ರಮಾಣ ಹೆಚ್ಚಾಗುತ್ತದೆ ಎಂದು ಅನುಮಾನ ವ್ಯಕ್ತಪಡಿಸಲಾಗುತ್ತದೆ. ಆದರೆ 26,000 ಅಮೆರಿಕನ್ನರ ಅಧ್ಯಯನವು ಹೆಚ್ಚಿನ ನಟ್ಸ್ ಮತ್ತು ಬೀಜಗಳನ್ನು ಸೇವಿಸುವ ಜನರು ಕಡಿಮೆ ಬೊಜ್ಜು ಹೊಂದಿದ್ದಾರೆಂದು ಕಂಡುಹಿಡಿದಿದೆ” ಇದನ್ನು ಮೈಕೆಲ್ ಟಿ. ಮುರ್ರೆ ಮತ್ತು ಜೋಸೆಫ್ ಪಿಜ್ಜಾರ್ನೊ ಅವರ ‘ದಿ ಎನ್ಸೈಕ್ಲೋಪೀಡಿಯಾ ಆಫ್ ಹೀಲಿಂಗ್ ಫುಡ್ಸ್’ ಪುಸ್ತಕದಲ್ಲಿ ಟಿಪ್ಪಣಿ ಮಾಡಲಾಗಿದೆ.
ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ
ಕುಂಬಳಕಾಯಿ ಬೀಜಗಳಲ್ಲಿ ಸತುವು ಸಮೃದ್ಧವಾಗಿರುವುದರಿಂದ, ಅವು ಕೋಶಗಳ ನವೀಕರಣವನ್ನು ಉತ್ತೇಜಿಸುತ್ತವೆ, ಹಾನಿಯನ್ನು ಸರಿಪಡಿಸುತ್ತವೆ ಮತ್ತು ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತವೆ. ಅಷ್ಟೇ ಅಲ್ಲ, ಈ ಬೀಜಗಳು ರಂಜಕದ ಉನ್ನತ ಮೂಲಗಳಲ್ಲಿ ಒಂದಾಗಿದ್ದು, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಗೆ ಮುಖ್ಯವಾಗಿದೆ. ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಶಿಯಂ ಸಹ ಸಮೃದ್ಧವಾಗಿವೆ. ಇದು ಹೃದಯವನ್ನು ಪಂಪ್ ಮಾಡುವುದು, ರಕ್ತನಾಳಗಳ ವಿಶ್ರಾಂತಿ ಮತ್ತು ಸೀಮ್ ಲೆಸ್ ಬೌಲ್ ಫಂಕ್ಷನ್’ನಂತಹ ಶಾರೀರಿಕ ಕಾರ್ಯಗಳಿಗೆ ನಿರ್ಣಾಯಕವಾಗಿದೆ. ಸಿಹಿ ಕುಂಬಳಕಾಯಿ ಬೀಜಗಳು ಉರಿಯೂತದ ಗುಣಗಳನ್ನು ಸಹ ಹೊಂದಿವೆ. ಬೀಜಗಳಲ್ಲಿ ಟ್ರಿಪ್ಟೊಫಾನ್ ಸಮೃದ್ಧವಾಗಿರುವ ಕಾರಣ ನಿದ್ರೆ ಮತ್ತು ಕಡಿಮೆ ಖಿನ್ನತೆಯನ್ನು ಉತ್ತೇಜಿಸುತ್ತವೆ.
ತೂಕ ಇಳಿಕೆಗೆ ಸಹಕಾರಿ:
ಬೊಜ್ಜು ದೇಹದವರು ಸಿಹಿ ಕುಂಬಳಕಾಯಿಯನ್ನು ಅಡಿಗೆಯಲ್ಲಿ ಸೇವಿಸುವುದರಿಂದ ಅವರ ಮೈ ತೂಕ ಕಡಿಮೆಯಾಗುತ್ತದೆ.
ಕಣ್ಣಿನ ಆರೋಗ್ಯಕ್ಕೆ ಉತ್ತಮ:
ಕುಂಬಳಕ್ಕೆ ಕಿತ್ತಳೆಯ ಬಣ್ಣವನ್ನು ನೀಡುವ ಕ್ಯಾರೋಟಿನಾಯ್ಡ್ ಉತ್ತಮ ಪ್ರಮಾಣದಲ್ಲಿವೆ. ಇದರ ಒಂದು ರೂಪವಾದ ಬೀಟಾ ಕ್ಯೋರೋಟಿನ್ ಅನ್ನು ದೇಹದ ಕಿಣ್ವಗಳು ಸುಲಭವಾಗಿ ವಿಟಮಿನ್ ಎ ಗೆ ಪರಿವರ್ತಿಸಿಬಿಡುತ್ತವೆ. ಇದು ಕಣ್ಣಿಗೆ ಉತ್ತಮ ಪೋಷಣೆ ನೀಡುವ ಜೊತೆಗೆ ಕಣ್ಣಿನ ಕ್ಷಮತೆಯನ್ನೂ ಹೆಚ್ಚಿಸುತ್ತದೆ.