ಶಿ ವಮೊಗ್ಗ:- ಸಿಎಂ ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ ಆಗಲಿ. ಆದರೆ, ಅವರು ರಾಜಕಾರಣ ಬಿಟ್ಟು ಇನ್ನಾದರೂ ಬಡವರ ಪರ ಧ್ವನಿಯೆತ್ತಿ ಸರ್ಕಾರದ ಯೋಜನೆಗಳನ್ನು ಸಾಕಾರಗೊಳಿಸಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಡವರ ಉದ್ಧಾರಕ್ಕಾಗಿಯೇ ಕಾಂಗ್ರೆಸ್ ಇದೆ ಎನ್ನುವವರು ಸಿದ್ದರಾಮಯ್ಯ ಹೇಳುತ್ತಾರೆ.
ದೇವರಾಜ ಅರಸು ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಕಳೆದ 10 ತಿಂಗಳಿನಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ.
ಇನ್ನೊಂದು ಕಡೆ ಇವರೇ ನೀಡಿದ ಗ್ಯಾರಂಟಿಗಳು ಕೂಡ ಜನರನ್ನು ತಲುಪುತ್ತಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಸಂಪೂರ್ಣ ಅಭಿವೃದ್ಧಿ ಕುಂಠಿತವಾಗಿದೆ. ಹಿಂದುಳಿದ ವರ್ಗಗಳು ಸೇರಿದಂತೆ ದಲಿತರ, ಬಡವರ, ಕಷ್ಟಗಳು ಹೆಚ್ಚಾಗಿವೆ, ಅವರ ಕಲ್ಯಾಣವಾಗುತ್ತಿಲ್ಲ. ರಾಜ್ಯದ ಅಭಿವೃದ್ಧಿಯೇ ಇಲ್ಲವಾಗಿದೆ. ಶಿವಮೊಗ್ಗ ಸೇರಿದಂತೆ ಇಡೀ ರಾಜ್ಯದಲ್ಲಿ ಒಂದೇ ಒಂದು ವಸತಿ ನಿರ್ಮಾಣವಾಗಿಲ್ಲ. ಶಿವಮೊಗ್ಗದಲ್ಲಿ ಸುಮಾರು 4800 ಮನೆಗಳು ನಿರ್ಮಾಣಕ್ಕಾಗಿ ಕಾಯುತ್ತಿವೆ ಎಂದರು.