ಮೈಸೂರು: ಅದೆಷ್ಟೋ ಜನರಿಗೆ ಪ್ರಾಣಿಗಳ ದರ್ಶನ ಸಿಗೋದೇ ಇಲ್ಲ. ಒಂದು ವೇಳೆ ಪ್ರಾಣಿಗಳ ದರ್ಶನವಾದರೆ ಅವರ ಸಂತೋಷಕ್ಕೆ ಮಿತಿಯೇ ಇರೋಲ್ಲ. ಅದರಂತೆ ನಾಗರಹೊಳೆ ಅಭಯಾರಣ್ಯದಲ್ಲಿ ಚಿರತೆ ದರ್ಶನವಾಗಿದ್ದು,
ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಕನಕೋಟೆ ಅಭಯಾರಣ್ಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಫಾರಿಗೆ ಹೋದವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

