ಕುರಿ, ಮೇಕೆ, ಜಾನುವಾರುಗಳನ್ನು ತಿಂದು ಗ್ರಾಮಸ್ಥರ ನಿದ್ದೆಗೆಡೆಸಿದ್ದ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೆಗ್ಗೇನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಗ್ರಾಮದ ಸುತ್ತಮುತ್ತ ಸುಮಾರು 15 ಕುರಿ ಮೇಕೆ ತಿಂದಿದ್ದ ಹಿನ್ನೆಲೆ ಸುತ್ತ ಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಇದರಿಂದ ಎಚ್ಚೆತ ಅರಣ್ಯ ಇಲಾಖೆ ಬೊನು ಇಟ್ಟು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೋನಿಗೆ ಬಿದ್ದ ಚಿರತೆ ಯನ್ನು ನೋಡಲು ಜನ ಮುಗಿ ಬಿದ್ದಿದ್ದರು. ಚಿರತೆ ಬೋನಿಗೆ ಬಿದ್ದ ನಂತರ ಸುತ್ತ ಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬೋನಿಗೆ ಬಿದ್ದ ಚಿರತೆ ಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗುವುದು ಎಂದು ಗೌರಿಬಿದನೂರು ವಲಯ ಅರಣ್ಯಾಧಿಕಾರಿ ಚೇತನ್ ತಿಳಿಸಿದ್ದಾರೆ.
