ಬೆಂಗಳೂರು: ದಾಸರಹಳ್ಳಿ ಕ್ಷೇತ್ರದ ಬಾಗಲಕುಂಟೆ ವಾರ್ಡ್ ದೊಡ್ಡಮಾರಣ್ಣ ಬಡಾವಣೆಯ ಕಾಂಕ್ರೀಟ್ ಡ್ರೈನೇಜ್ ಕಾಮಗಾರಿಗೆ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಎಲ್ಲಾ ವಾರ್ಡ್ಗಳಲ್ಲಿ ಏಕ ಕಾಲದಲ್ಲಿ ರಸ್ತೆ ಮತ್ತು ಸಿಸಿ ಡ್ರೈ ನೇಜ್ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಕ್ಷೇತ್ರದಲ್ಲಿ ರಸ್ತೆಗಳು ಸುಧಾರಣೆಯಾದರೆ ಕ್ಷೇತ್ರ ನಿವಾಸಿಗಳಿಗೆ ಅನುಕೂಲಕ ರವಾ ಗುತ್ತದೆ ಎಂದರು. ಈ ಹಿನ್ನೆಲೆ ಕಾಮಗಾರಿ ತ್ವರಿತವಾಗಿ ನಡೆಯುವಂತೆ ಅರ್ಧಕ್ಕೆ ವಿಳಂಬವಾಗದಂತೆ ಸರಿಯಾದ ಅವಧಿಗೆ ಪೂರ್ಣಗೊಳ್ಳುವಂತೆ ತಿಳಿಸಿದರು.
