ಕುಂದಗೋಳ : ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡದ ಹಿನ್ನೆಲೆ ತಾಲೂಕಿನ ಗೌಡಗೇರಿ ಗ್ರಾ.ಪಂ. ವ್ಯಾಪ್ತಿಯ ತಾಂಡಾದ ಮಹಿಳೆಯರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ಮಾಡಿದ ಘಟನೆ ಜರುಗಿತು. ಗ್ರಾ.ಪಂ. 1ನೇ ವಾರ್ಡಿನ ತಾಂಡಾದಲ್ಲಿ ಕುಡಿಯುವ ನೀರನ್ನು ಮೂರು-ನಾಲ್ಕು ದಿನಗಳಿಗೊಮ್ಮೆ ಬಿಟ್ಟರು ಅಲ್ಪ ಸಮಯಕ್ಕೆ ಬಿಟ್ಟು ಬಂದು ಮಾಡುತ್ತಾರೆ. ಇದರಿಂದ ನೀರಿನ ಅಭಾವದಿಂದ ನಾವು ಹೊರವಲಯದ ರೈತರ ಜಮೀನುಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಬಂದಿದೆ.
ಇದಕ್ಕೆ ನಾವು ಸಂಬಂಧಿಸಿದ ಗೌಡಗೇರಿ ಗ್ರಾ.ಪಂ.ಗೆ ಎಷ್ಟೋ ಬಾರಿ ಮನವಿ ನೀಡಿದರು ಆಡಳಿತ ಮಂಡಳಿ ಸರಿಯಾಗಿ ಸ್ಪಂದಿಸುತ್ತಿಲ್ಲ ಇದರಿಂದ ನಾವು ಬಿಂದಿಗೆ ಹಿಡಿದುಕೊಂಡು ನೀರು ಬಿಡುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಶಂಕರ್ ಲಮಾಣಿ, ನಿಂಗಪ್ಪ ಲಮಾಣಿ ಹಾಗೂ ಇತರರು ಪ್ರತಿಭಟನೆ ಮಾಡುವ ಮೂಲಕ ಆರೋಪಿಸಿದರು.
ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!
ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದಲೂ ಗಟಾರಗಳನ್ನು ಸ್ವಚ್ಛ ಮಾಡದೇ ಇರುವುದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ ಇದರಿಂದ ಸ್ಥಳೀಯರಿಗೆ ಆರೋಗ್ಯದ ಸಮಸ್ಯೆ ಹೆಚ್ಚುತ್ತಿದೆ. ಕಸದ ವಿಲೇವಾರಿ ಮಾಡುವ ವಾಹನ ಸಹಿತ ಬರುತ್ತಿಲ್ಲ, ವಿಲೇವಾರಿ ಮಾಡುವ ಕಸದ ವಾಹನದ ಚಾಲಕನಿಗೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸರಿಯಾಗಿ ಸಂಬಳ ಕೊಡದ ಹಿನ್ನೆಲೆ ವಾಹನ ಇದ್ದು ಇಲ್ಲದಂತಾಗಿದೆ.
ಗ್ರಾಮಸ್ಥರು ರಸ್ತೆ ಮೇಲೆ ಹಾಕುವ ಕಸವು ಗಟಾರುಗಳಿಗೆ ಹೋಗುತ್ತಿದೆ. ಇದರಿಂದ ನೆರೆಹೊರೆಯವರು ದಿನನಿತ್ಯ ಜಗಳ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ್ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಂತರ ಗ್ರಾಮ ಪಂಚಾಯತ ಆಡಳಿತ ಮಂಡಳಿಯವರು ಸರಿಯಾಗಿ ಸಮಯಕ್ಕೆ ನೀರು ಬಿಡುತ್ತೇವೆ, ಮುಂದೆ ಇತರ ಸಮಸ್ಯೆ ಆಗುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿರತ ಗ್ರಾಮಸ್ಥರು ಮನವಿ ಸಲ್ಲಿಸಿ ಮತ್ತೇ ಈ ಸಮಸ್ಯೆ ಮುಂದುವರೆದರೆ ಗ್ರಾಮ ಪಂಚಾಯತಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಹೇಮವ್ವಾ ಲಮಾಣಿ,ಗಂಗವ್ವಾ ಲಮಾಣಿ, ಪ್ರಕಾಶ್ ಲಮಾಣಿ ,ಹನುಮಂತಪ್ಪಾ ಕೆಳಗಿನಮನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.