ಗದಗ : ಸಿಎಂ ಸಿದ್ದರಾಮಯ್ಯ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆಗೆ ಖದೀಮರು ಕನ್ನ ಹಾಕಿದ್ದು, ಬಡ ಮಕ್ಕಳ ಹೊಟ್ಟೆ ಸೇರಬೇಕಿದ್ದ ಹಾಲಿನ ಪೌಡರ್ ಖದೀಮರ ಪಾಲಾಗುತ್ತಿದೆ.
ಕ್ಷೀರಭಾಗ್ಯ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆಯಾಗಬೇಕಿದ್ದ ಹಾಲಿನ ಪುಡಿಯನ್ನು ಅಕ್ರಮವಾಗಿ ಕ್ಯಾಂಟರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಯಾರಿಗೂ ಅನುಮಾನ ಬಾರದ ರೀತಿ ಶೇಂಗಾ ಹೊಟ್ಟಿನ ಚೀಲಗಳ ಮಧ್ಯೆ ಕ್ಷೀರಭಾಗ್ಯ ಹಾಲಿನ ಪೌಡರ್ ಸಾಗಾಟ ಮಾಡುತ್ತಿದ್ದರು.
ಗದಗನ ಬೆಟಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಹಾರಾಷ್ಟ್ರ ಪಾಸಿಂಗ್ ಹೊಂದಿರೋ ಕ್ಯಾಂಟರ್ ವಾಹನ ಸೀಜ್ ಮಾಡಿದ್ದು, ಹಾಲಿನ ಪುಡಿ ಸಾಗಿಸುತ್ತಿದ್ದ ವಿಜಯಪುರ ಜಿಲ್ಲೆ ಇಂಡಿ ಮೂಲದ ಸಂತೋಷ ಶಿಂದೆ (32) ಮತ್ತು ಬೆಟಗೇರಿಯ ಖಾಜಾಹುಸೇನ್ ಖಾದರನ್ನವರ (31) ಎಂಬುವರನ್ನು ಬಂಧಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮೌಲ್ಯದ 313 ಕೆಜಿ ಹಾಲಿನ ಪುಡಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಈ ಸಂಬಂಧ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.