ಹುಬ್ಬಳ್ಳಿ; ಕ್ಷತ್ರಿಯ ಮರಾಠಾ ಸಮಾಜ ಶಾಂಣ್ಣವ ಕುಳಿ ) ಚಾರಿಟೇಬಲ್ ಟ್ರಸ್ಟ್ ಆಂಜನೇಯದೇವಸ್ಥಾನದ ಹಿಂದೆ ಮರಾಠಾ ಗಲ್ಲಿ, ಹುಬ್ಬಳ್ಳಿ ವತಿಯಿಂದ ಮರಾಠಾ ಶ್ರೀ ಭಾರತಿಮಠ ಟ್ರಸ್ಟ್ ಇವರ ಆಶ್ರಯದಲ್ಲಿ ಹುಬ್ಬಳಿಯಲ್ಲಿ ಇದೇ ರವಿವಾರ 3 ಡಿಸೆಂಬರದಂದು ಕ್ಷತ್ರಿಯ ಮರಾಠಾ ಸಮಾಜದ ವಧು ವರರ ಸಮಾವೇಶವನ್ನು ಜೀಜಾಮಾತಾ ಮರಾಠಾ ಮಹಿಳಾ ಮಂಡಳ ಮರಾಠಾ ಗಲ್ಲಿ ಇವರ ಸಹಯೋಗದಲ್ಲಿ ವಿದ್ಯಾನಗರದ ಮರಾಠಾ ಭಾರತಿಮಠ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಳ್ಳಲಾಗಿದೆ.
ರವಿವಾರ ದಿ 3 ಡಿಸೆಂಬರದಂದು ಬೆಳಿಗ್ಗೆ 10 ಘಂಟೆಗೆ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಇವರು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ, ಶಾಸಕರಾದ ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ,ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ಪಾಲ್ಗೊಳ್ಳುವ ವಧು, ವರರ ನೋಂದಣಿಯು ರವಿವಾರದಂದು ಬೆಳಿಗ್ಗೆ 9 ಘಂಟೆಗೆ ಆರಂಭಗೊಳ್ಳಲಿದೆ. ಮರಾಠಾ ಸಮಾಜ ಬಾಂಧವರು ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕು ಎಂದು ಕ್ಷತ್ರಿಯ ಮರಾಠಾ ಸಮಾಜ (96/ ಶಾಂಣ್ಣವ ಕುಳಿ ) ಚಾರಿಟೇಬಲ್ ಟ್ರಸ್ಟ್ (ರಿ), ಆಂಜನೇಯದೇವಸ್ಥಾನದಅಧ್ಯಕ್ಷರಾದ ಶೈಲೇಂದ್ರ ಪಿ ಹೊನ್ನಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.