ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದಿನಿಂದ ನಾಲ್ಕು ದಿನ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ಬೆಳಗ್ಗೆ 1 1 ಗಂಟೆಗೆ ಸಿಎಂ ಸಿದ್ದರಾಮಯ್ಯರಿಂದ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ.ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಆಯೋಜನೆ ಮಾಡಲಾಗಿದ್ದುಐವರು ಸಾಧಕ ರೈತರಿಗೆ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಪ್ರದಾನ ಕೂಡ ಮಾಡಲಾಗುತ್ತೆ.
ಸಿಎಂ ಸಿದ್ದರಾಮಯ್ಯರಿಂದ ಜಿಕೆವಿಕೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ, 5 ಹೊಸ ತಳಿಗಳ ಬಿಡುಗಡೆ ಕೃಷಿ ಮೇಳದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಬೀಜ ಸಂತೆ’ ಆಯೋಜನೆಉದ್ಘಾಟನೆ ವೇಳೆ ಕೃಷಿ ಸಚಿವ ಚಲುವರಾಯ ಸ್ವಾಮಿ, ಡಿಸಿಎಂ ಡಿ.ಕೆ.ಶಿ, ಸಂಸದ ಡಿವಿ ಸದಾನಂದ ಗೌಡ ಉಪಸ್ಥಿತಿ ಉದ್ಘಾಟನ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಕೆವಿಕೆ ಕುಲಪತಿ ಎಸ್.ವಿ. ಸುರೇಶ ಭಾಗಿ
ಕೃಷಿ ಮೇಳದಲ್ಲಿ 625 ಮಳಿಗೆಗೆ ವ್ಯವಸ್ಥೆ, ಸಾರ್ವಜನಿಕರಿಗೆ ಉಚಿತ ಪ್ರವೇಶ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಅಂದ್ರೆ ಜಿಕೆವಿಕೆಯಲ್ಲಿ ಕೃಷಿ ಮೇಳ ಆಯೋಜನೆ ಕೃಷಿ ಮೇಳ ನೋಡಲು ಬರುವ ಜನರಿಗೆ ಉಚಿತ ಸಾರಿಗೆ ವ್ಯವಸ್ಥೆ ಹೊರಗಿನಿಂದ ಬರುವವರಿಗೆ ಜಕ್ಕೂರೂ ಏರೋಡ್ರಮ್ಸ್ ನಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ
ಈ ವರ್ಷದ ಕೃಷಿ ಮೇಳದ ವಿಶೇಷತೆ
ಹೊಸ ತಳಿ ಬಿಡುಗಡೆ*
– ಜಿಕೆವಿಕೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ, 5 ಹೊಸ ತಳಿಗಳ ಬಿಡುಗಡೆ
– ಸಾಮೆ, ಬರಗು, ರಾಗಿ, ಸೂರ್ಯಕಾಂತಿ, ಕೆಂಪು ಹಲಸಿನ ಹೊಸ ತಳಿಗಳು
– ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹೊಸ ತಳಿಗಳ ಬಿಡುಗಡೆ
ಪ್ರಾತ್ಯಕ್ಷಿಕೆಗಳ ಪ್ರದರ್ಶನ*
– ವಿದೇಶಿ ತಳಿಗಳಾದ ಬಾಟಲ್ ಬದನೆ, ಅಲಂಕಾರಿಕ ಸೂರ್ಯಕಾಂತಿ, ಚರಿ ಟೊಮ್ಯಾಟೊದ ಪ್ರಾತ್ಯಕ್ಷಿಕೆ
– ಬಾಟಲ್ ಬದನೆ, ಅಲಂಕಾರಿಕ ಸೂರ್ಯಕಾಂತಿ, ಚರಿ ಟೊಮ್ಯಾಟೊ ಬೆಳೆದಿರುವ ವಿವಿ ತೋಟಗಾರಿಕಾ ವಿಭಾಗ
– ರೈತರು ಇವುಗಳನ್ನ ಬೆಳೆದರೆ ಹೇಗೆ ಹೆಚ್ಚು ಆದಾಯ ಗಳಿಸಬಹುದು ಎಂಬ ಮಾಹಿತಿ ಸಿಗಲಿದೆ
– ಪ್ರಾತ್ಯಕ್ಷಿಕೆಯಲ್ಲಿ ಕೀಟಬಾಧೆ, ತಾಂತ್ರಿಕತೆ ಮತ್ತಿತರ ಮಾಹಿತಿ ರೈತರು ಪಡೆಯಬಹುದು
ಬೀಜ ಸಂತೆ*
– ಕೃಷಿ ಮೇಳದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಬೀಜ ಸಂತೆ’ ಆಯೋಜನೆ
– ಈವರೆಗೆ ಕೃಷಿ ಮೇಳದಲ್ಲಿ ಬಿತ್ತನೆ ಬೀಜ ಪ್ರದರ್ಶನಕ್ಕಷ್ಟೇ ಇಡಲಾಗ್ತಿತ್ತು
– ಈ ಬಾರಿ ಪ್ರದರ್ಶನದ ಜೊತೆಗೆ ಬಿತ್ತನೆ ಬೀಜಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ
ಸಿರಿಧಾನ್ಯ ಫುಡ್ಕೋರ್ಟ್*
– ಸಿರಿಧಾನ್ಯಗಳ ಬಳಕೆಗೆ ಪ್ರಮುಖ್ಯತೆ ನೀಡಲು ಸಿರಿಧಾನ್ಯಗಳ ಆಹಾರ ಮೇಳ ಆಯೋಜನೆ
– ಮೇಳದಲ್ಲಿ ಪ್ರತ್ಯೇಕ ಸಿರಿಧಾನ್ಯಗಳ ಫುಡ್ಕೋರ್ಟ್ ತೆರೆಯಲಾಗಿದೆ
– ವಿವಿಯ ಆಹಾರ ವಿಜ್ಞಾನ ವಿಭಾಗದಿಂದ ಸಿರಿಧಾನ್ಯ ಖಾದ್ಯಗಳ ರೆಸಿಪಿ ಪರಿಚಯ
ಐವರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ*
ಉತ್ತಮ ಸಾಧನೆ ಮಾಡಿದ ಐವರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪ್ರದಾನ
ವಿಶೇಷ ಆಕರ್ಷಣೆಗಳು*
1. ಕೃಷಿಯಲ್ಲಿನ ನೂತನ ತಂತ್ರಜ್ಞಾನದ ಮಾಹಿತಿ
2. ನೀರಿನ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ ಹಂಚಿಕೆ
3. ಪಶುಸಂಗೋಪನೆ, ಹೈನುಗಾರಿಕೆ ಬಗ್ಗೆ ಮಾಹಿತಿ
4. ಸಿರಿಧಾನ್ಯಗಳ ಕೃಷಿ, ಮಾರುಕಟ್ಟೆ ಹಾಗೂ ಮಹತ್ವದ ಕುರಿತು ಮಾಹಿತಿ ಹಂಚಿಕೆ
5. ಮಳೆ, ಮೇಲ್ಛಾವಣಿ ನೀರು ಕೊಯ್ಲು ಕುರಿತು ಮಾಹಿತಿ
6. ಕೃಷಿಯಲ್ಲಿ ಡ್ರೋನ್ ಬಳಕೆ, ನೂತನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ
7. ಹನಿ, ತುಂತುರು ಮತ್ತು ಸಾವಯವ ಕೃಷಿಯ ಕುರಿತು ಅಗತ್ಯ ಮಾಹಿತಿ ಹಂಚಿಕೆ
8. ಸುಧಾರಿತ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ
9. ಸಮಗ್ರ ಬೇಸಾಯ ಪದ್ಧತಿಗಳ ಕುರಿತು ಪ್ರಾತ್ಯಕ್ಷಿಕೆಗಳು