ಬೆಂಗಳೂರು: ಕೇರಳ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರು, ಶಾಸಕ ಹಾಗೂ ಕೇರಳದ ಮಾಜಿ ಸಚಿವ ಪಿ. ಟಿ. ಥಾಮಸ್ ಅವರ ನಿಧ ನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದರು. ಕೇರಳ ಕಾಂಗ್ರೆಸ್ ನ ಕಾರ್ಯಾಧ್ಯಕ್ಷರು, ನನಗೆ ಆತ್ಮೀ ಯರು ಆದ ಪಿ. ಟಿ. ಥಾಮಸ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ವಿದ್ಯಾರ್ಥಿ ಘಟಕದಿಂದ ಬೆಳೆದು ಬಂದ ಥಾಮಸ್ ಅವರು ಕೇರಳದಲ್ಲಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಲೋಕಸಭೆಗೂ ಆಯ್ಕೆಯಾಗಿದ್ದ ಅವರು, ಪರಿಸರ ಸಂರಕ್ಷಣೆಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಥಾಮಸ್ ಅವರ ಅಗಲಿಕೆ ಬರೀ ಕೇರಳಕ್ಕಷ್ಟೇ ಅಲ್ಲ ಕಾಂಗ್ರೆಸ್ ಪಕ್ಷಕ್ಕೇ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರಿಗೆ ಭಗವಂತ ನೀಡಲಿ ಎಂದು ಶೋಕ ವ್ಯಕ್ತಪಡಿಸಿದರು.
