ಅಭಿಯಾನದಲ್ಲಿ ಪೌಷ್ಟಿಕ ಆಹಾರದ ಮಹತ್ವ ಹಾಗೂ ಸಾಮಾನ್ಯ ಆರೋಗ್ಯ ಜೊತೆಜೊತೆಗೆ ಆಹಾರದಿಂದ ಹೇಗೆ ಆರೋಗ್ಯ ಗಳಿಸಿಕೊಳ್ಳಬೇಕು ಎನ್ನುವ ವಿಷಯದ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕ್ಷಯ ವಿಭಾಗ ಕೊಪ್ಪಳ ಉಪವಿಭಾಗಾ ಆಸ್ಪತ್ರೆ ತಾಲೂಕ ಕಚೇರಿ ಗಂಗಾವತಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಗಂಗಾವತಿಯ ಗೌಳಿನಗರದ ಲಕ್ಷ್ಮೀ ದೇವಸ್ಥಾನದ ಪಕ್ಕದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಉಪವಿಭಾಗ ಆಸ್ಪತ್ರೆಯ ಪರಿವೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಅವರು ನಮ್ಮ ಸುತ್ತಮುತ್ತಲಿನಲ್ಲಿ ದೊರೆಯುವ ಹಸಿರು ತರಕಾರಿಗಳು ಸೊಪ್ಪುಗಳು ಹಾಗೂ ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಬಳಸಿಕೊಂಡು ಹೇಗೆ ಆರೋಗ್ಯವಾಗಿರಬೇಕು ಜೊತೆಗೆ ಭಾರತೀಯ ಆಯುರ್ವೇದ ಆರೋಗ್ಯ ವೈದ್ಯ ಪದ್ಧತಿಯಲ್ಲಿ ತಿಳಿಸುವ ಹಾಗೆ
ಇತ್ತ ಬುಕ್ ಮಿತ್ ಬುಕ್ ರುತ್ ಬುಕ್ ಎಂದರೆ ಆಹಾರವನ್ನು , ಹಿತವಾಗಿ,ಮಿತವಾಗಿ, ಋತುವಿಗೆ ಅನುಸಾರವಾಗಿ ಬಳಸಿಕೊಳ್ಳಬೇಕು ಜೊತೆಜೊತೆಗೆ ಋತುವಿನಲ್ಲಿ ದೊರೆಯುವ ಹೇರಳವಾದ ತಾಜಾ ಹಣ್ಣುಗಳನ್ನು ಸೇವಿಸುವುದರಿಂದ ನೈಸರ್ಗಿಕ ಆರೋಗ್ಯ ವೃದ್ಧಿಯಾಗುವ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುವುದು ಎಂದು ಮನವರಿಕೆ ಮಾಡಿದರು ಹಾಗೆ ಮಾಸಿಕ ಉಪವಾಸ ಆಚರಣೆ ಹಾಗೂ ಅದರ ಮಹತ್ವ ರೋಗ-ರುಜಿನ ಬರೆದಿರುವ ಸರ್ವಜ್ಞ ರು ತಿಳಿಸಿರುವಂತೆ ಉಂಡು ನೂರು ಅಡಿಯಾಡಿ ಕೆಂಡಕ್ಕೆ ಕೈ ಕಾಸಿ ಬಲದಡಿಯ ಮೇಲ್ ಮಾಡಿ ಮಲಗಿದೊಡನೇ ರೋಗಕ್ಕೆ ಬಿನ್ನಾಣ ವಿಕ್ಕು ಸರ್ವಜ್ಞ

ಎನ್ನುವ ಸರ್ವಜ್ಞರ ಹಿತನುಡಿಯ ತಾತ್ಪರ್ಯ ದಂತೆ ಅಂದರೆ ಪ್ರತಿ ಊಟವಾದ ನಂತರ ಸುಮಾರು 100 ಅಡಿ ನಡೆಯುವುದು ಕೆಂಡಕ್ಕೆ ಕೈ ಕಾಯುವುದು ಎಂದರೆ ಕೈಗಳನ್ನು ಉಜ್ಜಿ ಬಿಸಿ ಮಾಡಿಕೊಳ್ಳುವುದು ಇದರಿಂದ ಪಚನಕ್ರಿಯೆಗೆ ಅನುಕೂಲವಾಗುತ್ತದೆ ಹಾಗೆ ಬಲಭುಜ ಮೇಲ್ ಮಾಡಿ ಮಲಗಿದರೇ ಹೃದಯ ಹಾಗೂ ರಕ್ತಸಂಚಾರಕ್ಕೆ ಅನುಕೂಲವಾಗಲೆಂದು ಈ ಹಿಂದೆಯೇ ಸರ್ವಜ್ಞ ಕವಿ ಅವರು ತಿಳಿಸಿರುವ ಹಾಗೆ ಜೀವನ ಗೈದು ಆರೋಗ್ಯವಾಗಿರಲು ತಿಳಿಸುತ್ತಾ ಸಾಂಕ್ರಾಮಿಕ ರೋಗಗಳಲ್ಲಿ ಬಹುದೊಡ್ಡ ಹಾಗೂ ಸಾವಿನ ಮನೆಯ ರಾಜ ಎಂದೇ ಖ್ಯಾತಿ ಪಡೆದಿರುವ ಕ್ಷಯ ರೋಗದ
ಕುರಿತು ಅರಿವು ಮೂಡಿಸುತ್ತಾ ಎರಡು ವಾರಕ್ಕು ಮೇಲ್ಪಟ್ಟು ಕೆಮ್ಮು ದೇಹದ ತೂಕ ಕಡಿಮೆಯಾಗುವುದು ಹಸಿವಾಗದಿರುವುದು ಸಾಯಂಕಾಲದ ಜ್ವರ ಬರುವುದು ಕಂಕುಳ ಮತ್ತು ಕುತ್ತಿಗೆಯಲ್ಲಿ ಗಡ್ಡೆಗಳ ಆಗಿರುವುದು ಲಕ್ಷಣಗಳು ಗೋಚರಿಸಿದರೆ ಹತ್ತಿರದ ಆರೋಗ್ಯ ಕಾರ್ಯಕರ್ತರು ಅಥವಾ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಡಲು ಮನವಿ ನೀಡಲಾಯಿತು, ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯ ಪ್ರತಿನಿಧಿಗಳಾದ ಶ್ರೀ ಸುನೀತಾ, ಶಶಿರೇಖಾ,ಗೌಳಿ ನಗರದ ಅನೇಕ ತಾಯಂದಿರು ಕರ್ನಾಟಕ ಆರೋಗ್ಯ ಸಮರ್ಥನ ಸಂಸ್ಥೆಯ ಕುಮಾರಿ ಖಾಸಿಂಬಿ ಕ್ಷಯ ವಿಭಾಗದ ಮಲ್ಲಿಕಾರ್ಜುನ್ ಇವರು ಭಾಗವಹಿಸಿದ್ದರು.