ಮಡಿಕೇರಿ:- ಜಮ್ಮು-ಕಾಶ್ಮೀರ ಪೂಂಚ್ನಲ್ಲಿ ಸಾವನ್ನಪ್ಪಿದ್ದ ಕೊಡಗಿನ ಯೋಧ ದಿವೀನ್ ಅಂತ್ಯಕ್ರಿಯೆ ಇಂದು ಅಂತ್ಯಕ್ರಿಯೆ ನಡೆಯಲಿದೆ.
ನ್ಯೂ ಇಯರ್ ಸಂಭ್ರಮ: ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡು, ಫುಲ್ ಟ್ರಾಫಿಕ್!
ಕುಶಾಲನಗದಲ್ಲಿ ದಿವಿನ್ ವಿದ್ಯಾಭ್ಯಾಸ ಮಾಡಿದ್ದ ಜಿಎಂಪಿ ಶಾಲಾ ಮೈದಾನದಲ್ಲಿ ಕೆಲ ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಬಳಿಕ ಕುಶಾಲನಗರದಿಂದ ನೇರವಾಗಿ ಆಲೂರು ಸಿದ್ದಾಪುರಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತದೆ. ಬಳಿಕ ದಿವಿನ್ ಅವರ ತೋಟದಲ್ಲಿರುವ ಅವರ ತಂದೆ ಸಮಾಧಿ ಪಕ್ಕದಲ್ಲಿ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಜಮ್ಮು-ಕಾಶ್ಮೀರ ಪೂಂಚ್ನಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೊಡಗಿನ ಯೋಧ ದಿವಿನ್ (28) ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ. ಅವರ ಪಾರ್ಥಿವ ಶರೀರ ಹೂಟ್ಟೂರು ತಲುಪಿದೆ.