ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅಕಸ್ಮಿಕವಾಗಿ ಅಗಲಿ ಹೋಗುತ್ತಿದ್ದಂತೆ ರಾಜ್ಯದಾದ್ಯಂತ ಇರುವ ಲಕ್ಷಾಂತರ ಅಭಿಮಾನಿ ಗಳು ನೊರೆಂಟು ರೀತಿಯಲ್ಲಿ ಅಗಲಿದ ಅಪ್ಪುಗೆ ನಮನ ಸೂಚಿಸಿದರು. ರಸ್ತೆ,ಗ್ರಂಥಾಲಯ, ಉದ್ಯಾನವನ, ಮೆಲ್ಸೇತುವೆ, ಮರ, ಗಿಡ, ಮಕ್ಕಳಿಗೂ ಅಪ್ಪು ಹೆಸರು ಇಟ್ಟು ಗೌರವ ಸಲ್ಲಿಸಿದರು. ಈ ಮಧ್ಯೆ ಕಳೆದ ಮೂರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು ಪುನೀತ್ ಪೋಟೋ ಇರುವ ನಂದಿನಿ ಹಾಲಿನ ಪ್ಯಾಕ್ ಪೋಟೋ. ರಾಜ್ಯದ ಪ್ರತಿಷ್ಟಿತ ಹಾಲು ಉತ್ಪಾದಕ ಹಾಗೂ ಮಾರಾಟ ಸಂಸ್ಥೆ,
ಕೆಎಮ್ ಎಫ್ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಲು ಹಾಲಿನ ಪ್ಯಾಕ್ ಮೇಲೆ ಪುನೀತ್ ಪೋಟೋ ಹಾಕಲು ನಿರ್ಧರಿಸಿದೆ ಎಂಬ ಸುದ್ದಿಗಳು ಹರಿದಾಡಿದವು.ಅಷ್ಟೇ ಅಲ್ಲ ಪುನೀತ್ ಪೋಟೋವನ್ನು ಹಾಲಿನ ಪ್ಯಾಕೇಟ್ ಮೇಲೆ ಹಾಕಿದ್ದಾರೆ ಎಂಬ ಸಂಗತಿಯನ್ನು ಇಟ್ಟುಕೊಂಡು ಕೆಎಮ್ ಎಫ್ ಗೆ ಅಭಿನಂದನೆಗಳ ಸುರಿಮಳೆಯೂ ಹರಿದು ಬಂದಿತ್ತು. ಆದರೆ ಇದರ ಸತ್ಯ ಪರಿಶೀಲನೆ ಹೊರಟಾಗ ಇಲ್ಲೊಂದು ಸಂಗತಿ ಬಯಲಾಗಿದ್ದು, ಕೆಎಂಎಫ್ ಹಾಲಿನ ಪ್ಯಾಕ್ ಮೇಲೆ ಪುನೀತ್ ರಾಜ್ ಕುಮಾರ್ ಪೋಟೋ ಹಾಕಿಲ್ಲ ಹಾಗೂ ಪೋಟೋ ಹಾಕುವ ಯಾವುದೇ ಪ್ರಸ್ತಾಪವೂ ಇಲ್ಲ ಎಂಬ ಸಂಗತಿಯನ್ನು ಕೆಎಂಎಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಾಲಿನ ಪ್ಯಾಕೇಟ್ ಮೇಲಿನ ಪುನೀತ್ ರಾಜ್ ಕುಮಾರ್ ಪೋಟೋ ವಿಚಾರ ನಮಗೆ ಗೊತ್ತಿಲ್ಲ. ನಾವು ಅಧಿಕೃತವಾಗಿ ಅಂತಹ ಯಾವುದೇ ತೀರ್ಮಾನ, ಅದೇಶ ಹೊರಡಿಸಿಲ್ಲ ಎಂದಿದ್ದಾರೆ. ಅಲ್ಲದೇ ಪುನೀತ್ ಬಗ್ಗೆ ಮಾತನಾಡಿ ರುವ ಕೆಎಮ್ ಎಫ್ ಅಧಿಕಾರಿಗಳು ಪುನೀತ್ ರಾಜ್ ಕುಮಾರ್ ಸದಾ ನಮ್ಮನ್ನು ಬೆಂಬಲಿಸಿದ್ದರು. 11 ವರ್ಷಗಳ ಕಾಲ ಗೌರವಧನ ಪಡೆಯದೇ ಕೆಎಮ್ ಎಫ್ ರಾಯಭಾರಿಯಾಗಿ ಕೆಲಸ ಮಾಡಿದ್ದರು ಎಂದು ಗೌರವ ಪೂರ್ವಕವಾಗಿ ನೆನಪಿಸಿಕೊಂಡಿದ್ದಾರೆ.
